ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಅಗಲಿದ ಗೃಹರಕ್ಷಕನಿಗೆ ನಮನ

ಅಗಲಿದ ಗೃಹರಕ್ಷಕನಿಗೆ ನಮನ


ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಮೂಲ್ಕಿ ಘಟಕದ ಗೃಹರಕ್ಷಕರಾದ ರಾಕೇಶ್ ಅವರು ಜೂ.30ರಂದು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅವರ ಮನೆಗೆ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ|| ಮುರಲೀಮೋಹನ್ ಚೂಂತಾರು ಮತ್ತು ಉಪಸಮಾದೇಷ್ಟರಾದ ರಮೇಶ್ ಇವರು ಮೃತ ಗೃಹರಕ್ಷಕರ ಮನೆಗೆ ಭೇಟಿ ನೀಡಿ ಅಂತಿಮ ನಮನವನ್ನು ಸಲ್ಲಿಸಿದರು.


ಅವರ ಮನೆಯವರಿಗೆ ಸಾಂತ್ವನ ನೀಡಿ, ರಾಕೇಶ್ ಅವರು ದಕ್ಷ, ಪ್ರಾಮಾಣಿಕ ದಿಟ್ಟ ಗೃಹರಕ್ಷಕರಾಗಿದ್ದು, ಅವರ ಅನಿರೀಕ್ಷಿತ ಸಾವಿನಿಂದ ಗೃಹರಕ್ಷಕ ಇಲಾಖೆಗೆ ತುಂಬಲಾರದ ನಷ್ಟವುಂಟಾಗಿದೆ ಎಂದು ಸಮಾದೇಷ್ಟರು ನುಡಿದರು.


ಅವರ ಕುಟುಂಬಕ್ಕೆ ಗೃಹರಕ್ಷಕ ಇಲಾಖೆಯಿಂದ ಸಿಗುವ ಎಲ್ಲಾ ಸಹಾಯವನ್ನು ನೀಡಲಾಗುವುದು ಎಂದರು.


0 تعليقات

إرسال تعليق

Post a Comment (0)

أحدث أقدم