ಬದಿಯಡ್ಕ: ಪರಮಪೂಜ್ಯ ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿರುವ ಕಾಮದುಘಾ ಯೋಜನೆಯನ್ವಯ ಕಾರ್ಯಾಚರಿಸುವ ಅಮೃತಧಾರಾ ಗೋಶಾಲೆ, ಗೋಲೋಕ, ಬಜಕೂಡ್ಲುವಿನ ಗೋವುಗಳ ಮೇವಿಗಾಗಿ ಹಸಿ ಹುಲ್ಲು ಸಂಗ್ರಹಿಸುವ ಶ್ರಮದಾನವು ಭಾನುವಾರ (ಜು.04) ಎಯ್ಯೂರಮೂಲೆ ಶ್ಯಾಮ ಪ್ರಸಾದ ಮನೆಯ ಪರಿಸರದಲ್ಲಿ ಗುರುವಂದನೆ, ಗೋವಂದನೆ ಮೂಲಕ ಜರಗಿತು.
ಮುಳ್ಳೇರಿಯಾ ಮಂಡಲ ಕುಂಬ್ಳೆ ವಲಯದ ಎಯ್ಯುರಮೂಲೆ ಶ್ಯಾಮ ಪ್ರಸಾದ ಭಟ್ ಇವರ ಹುಲ್ಲುಗಾವಲಿನಲ್ಲಿದ್ದ ಹುಲ್ಲನ್ನು ಬಜಕೂಡ್ಲು ಗೋಶಾಲೆಗೆ ಸಾಗಿಸಲಾಯಿತು.
ಕಾಮದುಘಾ ಕಾರ್ಯದರ್ಶಿ ವೈ ವಿ ಕೃಷ್ಣ ಮೂರ್ತಿ, ಮಂಡಲ ಸಂಘಟನಾ ಕಾರ್ಯದರ್ಶಿ ಕೇಶವ ಪ್ರಸಾದ ಎಡಕ್ಕಾನ, ಕುಂಬಳೆ ವಲಯ ಘಟಕ ಗುರಿಕ್ಕಾರ ಮಹಾಬಲೇಶ್ವರ ಭಟ್ಟ, ಅರೋಳಿ ಗೋಪಾಲಕೃಷ್ಣ, ಶಿವ ಪ್ರಸಾದ್ ಪೆರ್ಲ, ಶ್ರೀ ರಾಮ ಶರ್ಮ ಎಡಕ್ಕಾನ, ಸ್ಥಳಿಯ ಮಾತೆಯರು, ಶ್ರಮದಾನದಲ್ಲಿ ಭಾಗವಹಿಸಿದರು.
ಎಯ್ಯೂರಮೂಲೆ ಶ್ಯಾಮಪ್ರಸಾದ ಮತ್ತು ಮನೆಯವರು ಈ ಸೇವಾಕಾರ್ಯದ ಬಗ್ಗೆ ಬಹಳ ಸಂತೋಷ ಪಟ್ಟು ಇನ್ನೂ ಕೂಡ ಇಲ್ಲಿ ಈ ಕಾರ್ಯ ಮುಂದುವರಿಯಲಿ ಎಂಬುದಾಗಿ ಅಭಿಪ್ರಾಯ ವ್ಯಕ್ತಪಡಿಸಿದರು. ಸಾಗಟದ ಕಾರ್ಯದಲ್ಲಿ ಅಂಬಿಕಾ ವೆಂಕಟೇಶ್ವರ ಶಾಸ್ತ್ರೀ ದಂಪತಿಗಳು ಗಿರಿನಗರ ಬೆಂಗಳೂರು ಇವರು ಸಹಕರಿಸದರು. ಕೋವಿಡ್ ಮಾನದಂಡಕ್ಕೆ ಅನುಸಾರವಾಗಿ ನಿಯಮಪಾಲನೆಯೊಂದಿಗೆ ಕಾರ್ಯಕ್ರಮವನ್ನು ಕಾರ್ಯಗತಗೊಳಿಸಲಾಯಿತು.
#ಗೋವಿಗಾಗಿ_ಮೇವು #ಸೇವಾಅರ್ಘ್ಯ #ಗೋದೀಕ್ಷೆ #ಅಕ್ಷರದೀಕ್ಷೆ #ಕಾಮದುಘಾ #ಮೇವುಬ್ಯಾಂಕ್
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق