ಬೆಂಗಳೂರು : ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಮಂಡಳಿಯ ವತಿಯಿಂದ ನೀಡಲಾಗುತ್ತಿರುವ ಧನ ಸಹಾಯದಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆ ಮಾಡುವುದರ ಮೂಲಕ ಸಚಿವ ಶಿವರಾಮ ಹೆಬ್ಬಾರ್ ಅವರು ಕಾರ್ಮಿಕರಿಗೆ ಭರ್ಜರಿ ಕೊಡುಗೆಯನ್ನು ನೀಡಿದ್ದಾರೆ.
ಪಿಂಚಣಿ ಸೌಲಭ್ಯವನ್ನು 2000 ದಿಂದ 3 000 ರೂ. ಏರಿಸಲಾಗಿದೆ, ಕುಟುಂಬ ಪಿಂಚಣಿಯನ್ನು 1000 ದಿಂದ 2000 ರೂ. ವರೆಗೆ ಹೆಚ್ಚಿಸಿದ್ದಾರೆ.
ಹೆರಿಗೆ ಸೌಲಭ್ಯಗಳನ್ನು 20,000 ದಿಂದ 25,000 ರೂ. , ಮಂಡಳಿ ವತಿಯಿಂದ ಹೆಣ್ಣು ಮಗುವಿಗೆ ನೀಡಲಾಗುತ್ತಿದ್ದ 30,000 ರೂ. 35,000 ರೂ. ಗಳಿಗೆ ಏರಿಸಲಾಯಿತು.
ನರ್ಸರಿ ವಾರ್ಷಿಕ ಸಹಾಯ ಧನವನ್ನು 3000 ದಿಂದ 5000 ರೂ ಹೆಚ್ಚಿಸಲಾಯಿತು.
1 ರಿಂದ ನಾಲ್ಕನೇ ತರಗತಿಯ ಮಕ್ಕಳಿಗೆ 3 ರಿಂದ 5 ಸಾವಿರ ,5 ರಿಂದ 8 ನೇ ತರಗತಿಯ ಮಕ್ಕಳಿಗೆ 5 ಸಾವಿರ ದಿಂದ 8 ಸಾವಿರ, 9 ರಿಂದ 10 ನೇ ತರಗತಿಯ ಮಕ್ಕಳಿಗೆ 10 ರಿಂದ 12 ಸಾವಿರ ,
ಪ್ರಥಮ ಪಿಯುಸಿ ಮಕ್ಕಳಿಗೆ 10,೦0೦ ದಿಂದ 15,000 , ಐಟಿಐ ಮಕ್ಕಳಿಗೆ 12,000 ರಿಂದ 20,000 , ಪದವಿ ವಿಧ್ಯಾರ್ಥಿಗಳಿಗೆ 15,000 ದಿಂದ 25,000 ಹೆಚ್ಚಿಸಲಾಗಿದೆ.
ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ 25,000 ರಿಂದ 40,000 ಸಾವಿರ ಏರಿಸಲಾಗಿದೆ, ಡಿಪ್ಲೊಮಾ ವಿಧ್ಯಾರ್ಥಿಗಳಿಗೆ 15,000 ರಿಂದ 20,000 ಸಾವಿರ , ಎಮ್.ಬಿ.ಬಿ.ಎಸ್ ವಿಧ್ಯಾರ್ಥಿಗಳಿಗೆ 30 ಸಾವಿರದಿಂದ 50 ಸಾವಿರ ಎಮ್.ಡಿ ವಿಧ್ಯಾರ್ಥಿಗಳಿಗೆ 45 ರಿಂದ 7೦ ಸಾವಿರ ಪಿ.ಎಚ್.ಡಿ ವಿದ್ಯಾರ್ಥಿಗಳಿಗೆ 25 ರಿಂದ 50 ಸಾವಿರ ಗಳಷ್ಟು ಸಹಾಯ ಧನವನ್ನು ಹೆಚ್ಚಿಸಲಾಗಿದೆ.
ರಾಷ್ಟ್ರೀಯ ಕಾನೂನು ಕಾಲೇಜಿನಲ್ಲಿ ಹಾಗೂ IIT ಗಳಲ್ಲಿ ವ್ಯಾಸಂಗ ಮಾಡುವ ಕಟ್ಟಡ ಕಾರ್ಮಿಕರ ಮಕ್ಕಳ ಸಂಪೂರ್ಣ ಶೈಕ್ಷಣಿಕ ವೆಚ್ಚದಲ್ಲಿ ಮಂಡಳಿ ಭರಿಸಲಿದೆ, ಪ್ಯಾರಾ ಮೆಡಿಕಲ್ , ಬಿಎಡ್ ಕೋರ್ಸ್ ಗಳನ್ನು ಹೊಸದಾಗಿ ಸೇರಿಸಲಾಗಿದೆ.
ಕಾನೂನು ವ್ಯಾಸಂಗ ಮಾಡುತ್ತಿರುವ ವಿಧ್ಯಾರ್ಥಿಗಳಿಗೆ 30,000 ಹಾಗೂ ಇತರೆ ವೃತ್ತಿಪರ ಕೋರ್ಸ್ ಗಳಿಗೆ ಸಹಾಯ ಧನವನ್ನು ನೀಡಲಾಗುವುದು.
ಕಟ್ಟಡ ಕಾರ್ಮಿಕರ ವೈದ್ಯಕೀಯ ಸಹಾಯ ಧನವನ್ನು 10,000 ದಿಂದ 20,000 ರೂಪಾಯಿಗಳಿಗೆ ಹೆಚ್ಚಿಸಲಾಯಿತು, ವಿವಾಹ ಸಹಾಯಧನವನ್ನು 50 ಸಾವಿರದಿಂದ 60 ಸಾವಿರಕ್ಕೆ ಹೆಚ್ಚಿಸಲಾಯಿತು.
ಈ ಎಲ್ಲಾ ನೂತನ ಪರಿಷ್ಕೃತ ಸಹಾಯ ಧನವನ್ನು ಇಂದಿನಿಂದಲೇ ಜಾರಿಗೊಳಿಸುವಂತೆ ಮಾನ್ಯ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment