ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಾರು ಅಪಘಾತ; ಶಾಸಕ ಕೆ. ಶ್ರೀನಿವಾಸ ಗೌಡರ ಪುತ್ರನಿಗೆ ಗಾಯ

ಕಾರು ಅಪಘಾತ; ಶಾಸಕ ಕೆ. ಶ್ರೀನಿವಾಸ ಗೌಡರ ಪುತ್ರನಿಗೆ ಗಾಯ

 


ಕೋಲಾರ: ತಾಲ್ಲೂಕಿನ ಉರಟಿ ಅಗ್ರಹಾರ ಗೇಟ್‌ ಬಳಿ ಗುರುವಾರ ಮಧ್ಯಾಹ್ನ ಸಂಭವಿಸಿದ ಕಾರು ಅಪಘಾತದಲ್ಲಿ ಶಾಸಕ ಕೆ. ಶ್ರೀನಿವಾಸಗೌಡ ಅವರ ಪುತ್ರ ಮಂಜುನಾಥ್‌ ಗಾಯಗೊಂಡಿದ್ದಾರೆ.


 ಅವರು ಕಾರಿನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. 


ಎದುರಿನಿಂದ ಕಾರಿಗೆ ಅಡ್ಡ ಬಂದ ಬೈಕ್‌ ಸವಾರನನ್ನು ಪಾರು ಮಾಡುವ ಸಲುವಾಗಿ ಮಂಜುನಾಥ್‌ ಅವರ ಕಾರು ನಿಯಂತ್ರಣ ತಪ್ಪಿ ರಸ್ತೆಬದಿಯಲ್ಲಿ ಮಗುಚಿ ಬಿದ್ದಿದೆ ಎಂದು ವೇಮಗಲ್‌ ಪೊಲೀಸರು ತಿಳಿಸಿದ್ದಾರೆ.


ಮಂಜುನಾಥ್‌ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕಾರು ಜಖಂಗೊಂಡಿದೆ. 


ಈ ಬಗ್ಗೆ ಯಾವುದೇ ಪ್ರಕರಣ ದಾಖಲಿಸಿಲ್ಲ ಎಂದು ಹೇಳಿದ್ದಾರೆ.

0 Comments

Post a Comment

Post a Comment (0)

Previous Post Next Post