ಬೆಳ್ಳಾರೆ: ಮುಖ್ಯಮಂತ್ರಿ ಚಿನ್ನದ ಪದಕ ಪಡೆದ ದ.ಕ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ. ಮುರಲೀ ಮೋಹನ್ ಚೂಂತಾರು ಮತ್ತು ಬೆಳ್ಳಾರೆ ಘಟಕದ ಗೃಹರಕ್ಷಕರಾದ ಹೂವಪ್ಪ ಕಣ್ಕಲ್ ಅವರನ್ನು ಬೆಳ್ಳಾರೆ ಘಟಕದ ವತಿಯಿಂದ ಭಾನುವಾರ (ಜೂ.25) ಸನ್ಮಾನಿಸಲಾಯಿತು.
ನಿವೃತ್ತ ಶಿಕ್ಷಕ ಸುಚಿನ್ನ ಕಾಣಿಕೆ, ಪ್ರದೀಪ್ ಕುಮಾರ್ ರೈ ಪನ್ನೆ ಅವರು ಉಪಸ್ಥಿತರಿದ್ದರು. ಬೆಳ್ಳಾರೆ ಘಟಕದ ಘಟಕಾಧಿಕಾರಿಯಾದ ವಸಂತ್ ಕುಮಾರ್ ಸ್ವಾಗತಿಸಿದರು. ಬೆಳ್ಳಾರೆ ಘಟಕದ ಗೃಹರಕ್ಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ವೀರನಾಥನ್ ಬೆಳ್ಳಾರೆ ಕಾರ್ಯಕ್ರಮ ನಿರೂಪಿಸಿದರು.
ಮುರಲೀ ಮೋಹನ್ ಚೂಂತಾರುರವರು ಸಮಾಜ ಸೇವೆಯ ಮೂಲಕ ಪ್ರಪಂಚ ಮುಖದಲ್ಲಿ ಗುರುತಿಸಿಕೊಂಡಿದ್ದಾರೆ. ಹೂವಪ್ಪರವರು ಅತ್ಯುತ್ತಮ ಗೃಹರಕ್ಷಕ ಸಿಬ್ಬಂದಿ ಈ ನಿಟ್ಟಿನಲ್ಲಿ ಅವರ ಪ್ರಾಮಾಣಿಕ ಸೇವೆಗೆ ಮುಖ್ಯಮಂತ್ರಿ ಚಿನ್ನದ ಪದಕ ಲಭಿಸಿರುವುದು ನಮ್ಮೂರಿಗೆ ಹೆಮ್ಮೆ.
-ಪ್ರದೀಪ್ ಕುಮಾರ್ ಪನ್ನೆ
ಬಾಲ್ಯದಿಂದಲೇ ಪರಿಶ್ರಮಿಯಾಗಿ, ಗುರಿಯನ್ನು ಇಟ್ಟುಕೊಂಡು ಮುನ್ನಡೆಯುತ್ತಿದ್ದ ಮುರಲೀ ಮೋಹನ್ ಚೂಂತಾರುರವರಿಗೆ ಮತ್ತು ಹೂವಪ್ಪರಿಗೆ ಚಿನ್ನದ ಪದಕ ಲಭಿಸಿರುವುದು ನಮಗೆ ಹೆಮ್ಮೆಯ ವಿಷಯ.
-ಸುಚಿನ್ನ ಕಾಣಿಕೆ
ಗೃಹರಕ್ಷಕ ಸಿಬ್ಬಂದಿಗಳಿಗೆ ಸೇವಾ ಭದ್ರತೆಯನ್ನು ನೀಡುವುದರೊಂದಿಗೆ ಸಂಸ್ಥೆಯನ್ನು ಬಲಪಡಿಸಿಕೊಳ್ಳುವ ನಿಟ್ಟಿನಲ್ಲಿ ಸರಕಾರದ ಗಮನ ಸೆಳೆಯುವ ಕಾರ್ಯ ನಡೆಯಲಿ.
-ಎಂ. ಬಿ ಸದಾಶಿವ
إرسال تعليق