ವಿದ್ಯೆ ಬಾಳಿನ ಶ್ರೀಮಂತ ಕೊಡುಗೆ.ಎಂದೂ ಬರಿದಾಗದ ಸಂಪತ್ತು. ಕಲೆ ಸಂಸ್ಕಾರ ಸಂಸ್ಕೃತಿಗಳಿಗೆ ನಿಜ ಅರ್ಥನೀಡುವ ವಿದ್ಯಾ-ಶ್ರೀ ಹೆಸರಿನ ಕಲಾವಿದೆ ತನ್ನ ಸೃಜನ ಶೀಲ ಗೆರೆಗಳಲ್ಲಿ ಅತ್ಯುತ್ತಮ ಚಿತ್ರ ಮೂಡಿಸಿ ಗಮನ ಸೆಳೆದವರು.
ಮೂಲತ: ಬಂಟ್ವಾಳ ತಾಲೂಕಿನ ಬೆಂಜನಪದವಿನವರಾದ ಕು.ವಿದ್ಯಾಶ್ರೀ , ನಾರ್ಣಪ್ಪ ಮತ್ತು ಶ್ರೀಮತಿ ಭವ್ಯ ನಾರ್ಣಪ್ಪ ಅವರ ಪ್ರತಿಭಾ ಕುಡಿ. ತನ್ನ ಪ್ರಾಥಮಿಕ ಶಿಕ್ಷಣವನ್ನು ದ.ಕ.ಹಿ.ಪ್ರಾ ಶಾಲೆ ಬೆಂಜನಪದವಿನಲ್ಲಿ ಪೂರೈಸಿದ ಇವರು ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣವನ್ನು ಮುಗಿಸಿ ಪ್ರಕೃತ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಕಾಂ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.
ಬಾಲ್ಯದಿಂದಲೇ ಚಿತ್ರಕಲೆ ನೃತ್ಯ-ಇತ್ಯಾದಿ ಹವ್ಯಾಸಗಳನ್ನು ರೂಢಿಸಿಕೊಂಡಿರುವ ಕು. ವಿದ್ಯಾಶ್ರೀಯವರು ಪದವಿ ಶಿಕ್ಷಣದ ಕಡೆ ಹೆಚ್ಚು ಗಮನ ನೀಡುವುದರೊಂದಿಗೆ ಬಿಡುವಿನ ವೇಳೆಯಲ್ಲಿ ತನ್ನ ಭಾವನೆಗಳಿಗೆ ಸುಂದರ ರೂಪ ನೀಡುತ್ತಿರುವ ಸೃಜನಶೀಲ ಕಲಾವಿದೆ. ಕಲ್ಪನೆಯ ಕನಸುಗಾರ್ತಿ.
ಕು.ವಿದ್ಯಾಶ್ರೀಯವರ ಚಿತ್ರ- ರಚನೆಗಳು ಕಲಾವಿದರ ಮನ ಸೂರೆಗೊಳ್ಳುವಂತಿವೆ. ಕರಾವಳಿಯ ಖ್ಯಾತ ಯುವ ಗಾಯಕಿ ಕಲಾ ಪ್ರೋತ್ಸಾಹಕಿ ಗಾನಕೋಗಿಲೆ ಶೀಲಾ ಪಡೀಲ್ ಮಂಗಳೂರು ಇವರು, ತನ್ನ ಅಕ್ಕನ ಮಗಳಾಗಿರುವ ಕು.ವಿದ್ಯಾಶ್ರೀಯವರ ಶಿಕ್ಷಣ ಕಲೆಗೆ ತುಂಬು ಪ್ರೋತ್ಸಾಹ ನೀಡುತ್ತಿರುವರು.
ಯುವ ಪ್ರತಿಭೆ ಸೃಜನ ಶೀಲ ಚಿತ್ರ ಕಲಾವಿದೆ ಕು.ವಿದ್ಯಾಶ್ರೀ ಬೆಂಜನಪದವು ಇವರ ಚಿತ್ರಕಲೆಗಳು ನಾಡಿನಾದ್ಯಂತ ಬೆಳಗಲೆಂದು ಶುಭ ಹಾರೈಸೋಣ.
-ನಾರಾಯಣ ರೈ ಕುಕ್ಕುವಳ್ಳಿ.
إرسال تعليق