ಹಾಸನ: ಸ್ನೇಹಿತರೊಂದಿಗೆ ಈಜಲು ಹೋದ ಯುವಕ ನೀರುಪಾಲಾಗಿರುವ ಘಟನೆಯೊಂದು ಜಿಲ್ಲೆಯ ಸಕಲೇಶಪುರ ಪಟ್ಟಣದಲ್ಲಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಮೂಲದ ಜನ್ನಾಪುರ ಗ್ರಾಮದ ಪುನೀತ್ (24) ವರ್ಷ ಮೃತ ದುರ್ದೈವಿ.
ಸಕಲೇಶಪುರ ಪಟ್ಟಣದ ಅಗ್ರಹಾರ ಬಡಾವಣೆ ಸ್ನೇಹಿತನ ಮನೆಗೆ ಬಂದಿದ್ದ ಪುನೀತ್, ಸ್ನೇಹಿತರೊಂದಿಗೆ ಹೇಮಾವತಿ ನದಿಗೆ ಈಜಲು ಹೋಗಿದ್ದಾರೆ. ಈ ವೇಳೆಯಲ್ಲಿ ನಿತ್ರಾಣಗೊಂಡು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಸಕಲೇಶಪುರ ಪಟ್ಟಣ ಠಾಣೆ ಪೊಲೀಸರು ಮೃತದೇಹ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
إرسال تعليق