ಜೈಪುರ: ಒಬ್ಬಂಟಿಯಾಗಿ ಪ್ರವಾಸಕ್ಕಾಗಿಯೇ ಹೊಸ ಡಿಎಸ್‌ಎಲ್‌ಆರ್ ಕ್ಯಾಮೆರಾ ಮತ್ತು ಹೊಸ ಮೊಬೈಲ್ ಫೋನ್‌ಗಳನ್ನು ಖರೀದಿಸಿ ಅದರಂತೆ ಹಿಮಾಚಲ ಪ್ರದೇಶಕ್ಕೆ ಪ್ರವಾಸ ಕೈಗೊಂಡಿದ್ದ ರಾಜಸ್ಥಾನದ ಆಯುರ್ವೇದದ ವೈದ್ಯೆ ಸಾವಿಗೀಡಾದ ಘಟನೆ ನಡೆದಿದೆ.
ಹಿಮಾಚಲ ಪ್ರದೇಶದ ಕಿನ್ನೌರ್‌ನಲ್ಲಿ ಭಾನುವಾರ ಸಂಭವಿಸಿದ ಭೂಕುಸಿತದ ಪರಿಣಾಮ ಜೈಪುರದ ಆಯುರ್ವೇದದ ವೈದ್ಯೆಯಾದ ದೀಪಾ ಶರ್ಮಾ (34) ವರ್ಷ ಸೇರಿದಂತೆ ಇತರ 8 ಪ್ರವಾಸಿಗರು ಸಾವಿಗೀಡಾಗಿದ್ದಾರೆ.
ಆದರೆ ಅವರು ಸಾವಿಗೂ ಮುನ್ನ ಇಂಡೋ-ಟಿಬೆಟನ್ ಬಾರ್ಡರ್ ಪೊಲೀಸ್ ಪಡೆಯ ಫಲಕದ ಮುಂದೆ ಕ್ಯಾಮರಾ ಹಿಡಿದು ನಿಂತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿತ್ತು. ಆದರೆ ಈ ಫೋಟೋ ಪೋಸ್ಟ್ ಮಾಡಿದ ಒಂದೇ ಗಂಟೆಯಲ್ಲಿ ಅವರು ಭೂಕುಸಿತದಲ್ಲಿ ಸಾವನ್ನಪ್ಪಿದ್ದಾರೆ.
إرسال تعليق