ನಮ್ಮ ಯುವಕ-ಯುವತಿಯರು ಕಲಿಕೆಯೊಂದಿಗೆ ಸಾಹಿತ್ಯ ಕಲೆಗಳನ್ನೂ ರೂಢಿಸಿಕೊಂಡಿರುವುದು ತುಂಬಾ ಹೆಮ್ಮೆಯ ಸಂಗತಿಯಾಗಿದೆ.
ಕಬಕ ಪೋಳ್ಯ ಮನೆಯ ಹೊನ್ನಪ್ಪ ಗೌಡ ಮತ್ತು ಸೀತಾ ಹೊನ್ನಪ್ಪ ಗೌಡರ ಪುತ್ರಿ ಕು.ಭವ್ಯ ಪಿ. ಪುತ್ತೂರು ಸರಕಾರಿ ಮಹಿಳಾ ಕಾಲೇಜಿನಲ್ಲಿ ಅಂತಿಮ ಬಿ.ಕಾಂ ವಿದ್ಯಾರ್ಥಿನಿ.
ಬಾಲ್ಯದಿಂದಲೇ ಓದುವ, ನ್ಯೂಸ್ ಕೇಳುವ ಕಿರು ಲೇಖನ ಬರೆಯುವ ಹವ್ಯಾಸ ಬೆಳೆಸಿಕೊಂಡಿರುವ ಕು.ಭವ್ಯ ಪೋಳ್ಯ ಅವರು ಕ್ರಾಫ್ಟ್, ಆಭರಣ ತಯಾರಿ ಕಲೆಯ ಪ್ರತಿಭೆ. ಅವರ ಅನೇಕ ವಿನ್ಯಾಸಗಳ ನೇಯ್ಗೆ, ಕಿವಿಯೋಲೆ ಜುಮುಕಿ ಆಭರಣ ತಯಾರಿ ಕಲೆ ಚಿತ್ತಾಕರ್ಷಕವಾಗಿವೆ.
ತನ್ನ ಪ್ರಾಥಮಿಕ ಶಿಕ್ಷಣವನ್ನು ಅಮ್ಟೂರು-ಕೆದ್ಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಗಿಸಿ ಮುಂದೆ ಪ್ರೌಢ ಶಾಲಾ ಶಿಕ್ಷಣ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಪುತ್ತೂರು ಸರಕಾರಿ ಪದವಿ ಪೂರ್ವ ಕಾಲೇಜು ಕೊಂಬೆಟ್ಟುವಿಲ್ಲಿ ಪೂರ್ಣಗೊಳಿಸಿದರು.
ಕು.ಭವ್ಯ ಪೋಳ್ಯ ಅವರು ಶಿಕ್ಷಣ ಹಾಗೂ ಕ್ರಾಫ್ಟ್ ಕಲೆಯಲ್ಲಿ ಇನ್ನಷ್ಟು ಸಾಧನೆ ಮಾಡಲೆಂದು ಹಾರೈಸೋಣ.
-ನಾರಾಯಣ ರೈ ಕುಕ್ಕುವಳ್ಳಿ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق