ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಂಟೈನರ್ ಲಾರಿ ಮತ್ತು ಕಾರು ಅಪಘಾತ; ಗಂಭೀರ ಗಾಯಗೊಂಡ ಫೋಟೋಗ್ರಾಫರ್

ಕಂಟೈನರ್ ಲಾರಿ ಮತ್ತು ಕಾರು ಅಪಘಾತ; ಗಂಭೀರ ಗಾಯಗೊಂಡ ಫೋಟೋಗ್ರಾಫರ್

 


ದಾವಣಗೆರೆ : ಮದುವೆ ಪೋಟೋಶೂಟ್ ಮುಗಿಸಿ ಬರುತ್ತಿದ್ದ ವೇಳೆಯಲ್ಲಿ ಕಂಟೈನರ್ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಕುಂದಾಪುರದ ಹಿರಿಯ ಪೋಟೋಗ್ರಾಫರ್ ಹಾಗೂ ಅವರ ಮಗ ಗಂಭೀರವಾಗಿ ಗಾಯಗೊಂಡ ಘಟನೆ ದಾವಣಗೆರೆಯಲ್ಲಿ ನಡೆದಿದೆ.


ಅಪಘಾತದಲ್ಲಿ ಗಂಭೀರಗೊಂಡವರನ್ನು ಕುಂದಾಪುರದ ಹಿರಿಯ ಫೋಟೋಗ್ರಾಫರ್ ಹೇರೂರು ಅಶೋಕ ಕುಮಾರ್ ಶೆಟ್ಟಿ(58) ವರ್ಷ ಮತ್ತು ಅವರ ಪುತ್ರ ಪನ್ನಗ (24) ವರ್ಷ ಎಂದು ಗುರುತಿಸಲಾಗಿದೆ. ಹಿಂಬದಿಯಲ್ಲಿ ಕುಳಿತಿದ್ದ ಕುಮಾರ್ ಎಂಬಾತ ಸಣ್ಣಪುಟ್ಟ ಗಾಯಗಳಿಂದ ಬಚಾವ್ ಆಗಿದ್ದಾನೆ.


ನಾವುಂದದಲ್ಲಿ ಮಾನಸ ಸ್ಟುಡಿಯೋ ಮಾಲಕರಾಗಿರುವ ಅಶೋಕ್ ಕುಮಾರ್ ಶೆಟ್ಟಿ ಮದುವೆ ಕಾರ್ಯಕ್ರಮವೊಂದರ ಚಿತ್ರೀಕರಣಕ್ಕಾಗಿ ಮಗ ಪನ್ನಗ ಹಾಗೂ ಕುಮಾರ್ ಎಂಬುವರ ಜೊತೆ ಕಾರಿನಲ್ಲಿ ತೆರಳಿದ್ದರು.


ನಿನ್ನೆ ಮದುವೆ ಕಾರ್ಯಕ್ರಮ ಮುಗಿಸಿ ರಾತ್ರಿ ವಾಪಾಸ್ ಬರುತ್ತಿರುವ ಸಮಯದಲ್ಲಿ ಮುಂಜಾನೆ 3 ಗಂಟೆ ವೇಳೆ ಎದುರಿನಿಂದ ಹೋಗುತ್ತಿದ್ದ ಕಂಟೈನರ್ ಲಾರಿಗೆ ಕಾರು ಡಿಕ್ಕಿ ಹೊಡೆದಿದೆ.


ಅಪಘಾತದ ವೇಗಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಈ ಅಪಘಾತ ದಲ್ಲಿ ಅಪ್ಪಮಗ ಇಬ್ಬರಿಗೂ ಗಂಭೀರ ಗಾಯಗಳಾಗಿದ್ದು, ಅವರನ್ನು ದಾವಣಗೆರೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.


(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم