ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಹೋಂಗಾರ್ಡ್ಸ್‌ ಉಳ್ಳಾಲ ಘಟಕದ ಪ್ರಭಾರ ಅಧಿಕಾರಿ ಭಾಸ್ಕರ್ ಎಂ. ಅವರಿಗೆ ಮುಖ್ಯಮಂತ್ರಿ ಚಿನ್ನದ ಪದಕ

ಹೋಂಗಾರ್ಡ್ಸ್‌ ಉಳ್ಳಾಲ ಘಟಕದ ಪ್ರಭಾರ ಅಧಿಕಾರಿ ಭಾಸ್ಕರ್ ಎಂ. ಅವರಿಗೆ ಮುಖ್ಯಮಂತ್ರಿ ಚಿನ್ನದ ಪದಕ


ಮಂಗಳೂರು: ಉಳ್ಳಾಲ ಘಟಕದ ಪ್ರಭಾರ ಘಟಕಾಧಿಕಾರಿಯಾದ ಭಾಸ್ಕರ್ ಎಂ. ಇವರ ಹೆಸರನ್ನು ಮುಖ್ಯಮಂತ್ರಿಗಳ ಪದಕಕ್ಕೆ ಜಿಲ್ಲಾ ಸಮಾದೇಷ್ಟರಾದ ಡಾ|| ಮುರಲೀ ಮೋಹನ ಚೂಂತಾರು ಶಿಫಾರಸ್ಸು ಮಾಡಿದ್ದು, ಅವರಿಗೆ 2020ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕ ಘೋಷಣೆಯಾಗಿದೆ.


ಅವರು 01-09-1986ರಲ್ಲಿ ಇಲಾಖೆಗೆ ಸೇರಿ ಸುಮಾರು 35 ವರ್ಷಗಳ ಕಾಲ ನಿಷ್ಕಾಮ ಸೇವೆಯನ್ನು ಸಲ್ಲಿಸಿರುತ್ತಾರೆ. ರೈಲ್ವೇ ಇಲಾಖೆ, ಕೆ.ಎಸ್.ಆರ್.ಟಿ.ಸಿ., ಪ್ರವಾಹ ರಕ್ಷಣಾ  ಕರ್ತವ್ಯ, ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ, ಕಾನೂನು ಸುವ್ಯವಸ್ಥೆ ಕರ್ತವ್ಯಗಳಾದ ಚುನಾವಣೆ, ಗಣೇಶ್ ಹಬ್ಬದ ಬಂದೋಬಸ್ತ್, ದಸರಾ ಬಂದೋಬಸ್ತ್ ಕರ್ತವ್ಯ, ಕೋವಿಡ್-19 ಕರ್ತವ್ಯಗಳನ್ನು ನಿರ್ವಹಿಸಿರುತ್ತಾರೆ.


ಸಾಮಾಜಿಕ ಕಳಕಳಿ ಇರುವ ಇವರ ಸೇವಾ ಮನೋಭಾವ ಮತ್ತು ಪ್ರಾಮಾಣಿಕತೆಗೆ ಸಾರ್ವಜನಿಕರಿಂದಲೂ ಪ್ರಶಂಸನೆ ಪಡೆದಿದ್ದಾರೆ. ಇವರು ಇತರ ಗೃಹರಕ್ಷಕರಿಗೆ ಮಾದರಿ ಎಂದೂ ಸಮಾದೇಷ್ಟರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



0 تعليقات

إرسال تعليق

Post a Comment (0)

أحدث أقدم