ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬೆಳ್ತಂಗಡಿ: ಆರಕ್ಷಕ ಠಾಣಾ ವೃತ್ತ ನಿರೀಕ್ಷಕರಾಗಿ ಶಿವಕುಮಾರ್ ಬಿ ನೇಮಕ

ಬೆಳ್ತಂಗಡಿ: ಆರಕ್ಷಕ ಠಾಣಾ ವೃತ್ತ ನಿರೀಕ್ಷಕರಾಗಿ ಶಿವಕುಮಾರ್ ಬಿ ನೇಮಕ

 


ಬೆಳ್ತಂಗಡಿ : 
ಬೆಳ್ತಂಗಡಿ ಆರಕ್ಷಕ ಠಾಣಾ ವೃತ್ತ ನಿರೀಕ್ಷಕರಾಗಿ ನೇಮಕಗೊಂಡ ಶಿವಕುಮಾರ್ ಬಿ ಯವರು ಜು.2 ರಂದು ಬೆಳ್ತಂಗಡಿ ಕಛೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.

ಶಿವಮೊಗ್ಗ ಜಿಲ್ಲೆಯ ಸಾಗರ ನಿವಾಸಿಯಾಗಿರುವ ಇವರು ಉತ್ತರ ಕನ್ನಡ ಜಿಲ್ಲೆಯ ಆರಕ್ಷಕ ಠಾಣೆಯಲ್ಲಿ ವೃತ್ತ ನಿರೀಕ್ಷಕರಾಗಿ ಸೇವೆ ಸಲ್ಲಿಸಿದ್ದು, ಬೆಳ್ತಂಗಡಿ ಆರಕ್ಷಕ ಠಾಣಾ ವೃತ್ತ ನಿರೀಕ್ಷಕರಾಗಿ ನೇಮಕಗೊಳಿಸಿ ಸರಕಾರ ಆದೇಶ ನೀಡಿದೆ.

 ಜು.2 ರಂದು ಸಂಜೆ ಬೆಳ್ತಂಗಡಿ ವೃತ್ತ ನಿರೀಕ್ಷಕರಾಗಿ  ಅಧಿಕಾರ  ಸ್ವೀಕರಿಸಿದ್ದಾರೆ.

ಈ ಸಂದರ್ಭದಲ್ಲಿ  ಬೆಳ್ತಂಗಡಿ ಆರಕ್ಷಕ ಠಾಣಾ ವ್ಯಾಪ್ತಿಯ ಪುಂಜಾಲಕಟ್ಟೆ, ಬೆಳ್ತಂಗಡಿ ,ಧರ್ಮಸ್ಥಳ , ವೇಣೂರು, ಬೆಳ್ತಂಗಡಿ ಸಂಚಾರಿ ಠಾಣೆಯ ಪಿಎಸ್ಐ ಗಳು, ಸಿಬ್ಬಂದಿವರ್ಗದವರು ಉಪಸ್ಥಿತರಿದ್ದು, ಶಿವಕುಮಾರ್ ಬಿ ರವರಿಗೆ ಹೂಗುಚ್ಚ ನೀಡಿ ಶುಭ ಹಾರೈಸಿದರು. ಬಳಿಕ ತಮ್ಮ ವ್ಯಾಪ್ತಿಯ ಕಾನೂನು ಸುವ್ಯವಸ್ಥೆ ಬಗ್ಗೆ ಸಭೆ ನಡೆಸಿದರು.

 

0 تعليقات

إرسال تعليق

Post a Comment (0)

أحدث أقدم