ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿನ ಕೃಷಿ ಭವನದ ನೇತೃತ್ವದಲ್ಲಿ ನಡೆದ "ಓಣಂಗೆ ಒಂದು ಹಿಡಿ ತರಕಾರಿ" ಎಣ್ಮಕಜೆ ಪಂಚಾಯತ್ ಮಟ್ಟದ ಯೋಜನೆಗೆ ಚಾಲನೆ ನೀಡಲಾಗಿದೆ. ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್. ತರಕಾರಿ ಕೃಷಿ ಬೀಜಗಳನ್ನು ವಿತರಿಸುವ ಮೂಲಕ ಉದ್ಘಾಟಿಸಿದರು.
ಪಂ.ಸದಸ್ಯರಾದ ಬಿ.ಎಸ್.ಗಾಂಭೀರ್, ಇಂದಿರಾ, ರಾಮಚಂದ್ರ ಮೊಳಕ್ಕಲ್, ಕೃಷಿ ಅಧಿಕಾರಿ ವಿನೀತ್ ವಿ.ವರ್ಮ, ಕೃಷಿ ಭವನದ ಉದ್ಯೋಗಿಗಳು, ಕೃಷಿಕರು ಪಾಲ್ಗೊಂಡಿದ್ದರು.
إرسال تعليق