ಬೆಂಗಳೂರು; ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೋವಿಡ್ ಲಸಿಕೆ ಅಭಿಯಾನದ ಅಂಗವಾಗಿ 'ಲಸಿಕಾ' ವಾಹನಗಳಿಗೆ ಚಾಲನೆ ನೀಡಿದೆ. ಕೋವಿಡ್ ಪರೀಕ್ಷೆಗೆ ಸ್ವ್ಯಾಬ್‌ಗಳನ್ನು ಸಹ ವಾಹನ ಸಂಗ್ರಹ ಮಾಡಲಿದೆ.
ಮಂಗಳವಾರ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಬಿಬಿಎಂಪಿಯ ಲಸಿಕಾ ಅಭಿಯಾನದ ಅಂಗವಾಗಿ ಲಸಿಕೆ ವಾಹನಗಳಿಗೆ ಚಾಲನೆ ನೀಡಿದರು. ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ ಸೇರಿದಂತೆ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಷಣ್ಮುಖ ಇನ್ನೋವೇಷನ್ಸ್ ತಯಾರಿಸಿರುವ ವಾಹನಗಳು ಐಸಿಎಂಆರ್ ಅನುಮೋದಿತ ಸಂಚಾರಿ ಪ್ರಯೋಗಾಲಯದ ಮೂಲಕ ಕೋವಿಡ್ ಪರೀಕ್ಷೆಗೆ ಸ್ವ್ಯಾಬ್ ಮಾದರಿಗಳನ್ನೂ ಸಹ ನಗರದ ವಿವಿಧ ಭಾಗಗಳಿಂದ ಸಂಗ್ರಹ ಮಾಡಲಿವೆ.
https://twitter.com/CMofKarnataka/status/1407247157053198351?s=20
ಬಿಬಿಎಂಪಿಯ ಕೋವಿಡ್ ಲಸಿಕಾ ಅಭಿಯಾನದ ಅಂಗವಾಗಿ ಈ ವಾಹನಗಳು ನಗರದಾದ್ಯಂತ ಲಸಿಕೆಗಳನ್ನು ವಿತರಿಸುತ್ತಿದ್ದು ಲಸಿಕಾ ಕೇಂದ್ರಗಳಿಗೆ ಲಸಿಕೆಗಳನ್ನು ವಾಹನದ ಮೂಲಕ ತಲುಪಿಸಲಾಗುತ್ತದೆ.
ಒಂದು ವಾಹನದಲ್ಲಿ 8 ಲಸಿಕೆ ಪೆಟ್ಟಿಗೆಗಳು/ 6 ಸಿರಿಂಜ್ ಪೆಟ್ಟಿಗೆಗಳನ್ನು ಸಾಗಿಸಬಲ್ಲದು. ಒಂದು ಬಾರಿಗೆ ಸುಮಾರು 9000 ಡೋಸ್ ಲಸಿಕೆಗಳನ್ನು ಈ ವಾಹನದಲ್ಲಿ ಸಾಗಿಸಬಹುದು.
ಪ್ಯಾರೆಕ್ಸೆಲ್, ಫ್ಲೋಸರ್ವ್, ಕೀಸೈಟ್ ಮತ್ತು ಯುನೈಟೆಡ್ ವೇ ಬೆಂಗಳೂರಿನ ಸಹಭಾಗಿತ್ವದಲ್ಲಿ ಈ ವಾಹನಗಳನ್ನು ಪರಿಚಯಿಸಲಾಗಿದೆ. ಷಣ್ಮುಖ ಇನ್ನೋವೇಷನ್ಸ್ ಬೆಂಗಳೂರಿನಲ್ಲಿ ಈ ವಾಹನಗಳನ್ನು ತಯಾರಿಸಿವೆ.
إرسال تعليق