ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕೊರೊನದ ಕುರಿತಾಗಿ ನಗರಕ್ಕೆ ಪಾಠ ಹೇಳಬೇಕಾದವರ ಸ್ಥಿತಿ ನೇೂಡಿ!

ಕೊರೊನದ ಕುರಿತಾಗಿ ನಗರಕ್ಕೆ ಪಾಠ ಹೇಳಬೇಕಾದವರ ಸ್ಥಿತಿ ನೇೂಡಿ!


ಬುಧವಾರ ನಡೆದ ಉಡುಪಿ ನಗರ ಸಭೆಯ ಚಿತ್ರಣ ನೇೂಡಿ. ಮಾಸ್ಕ್‌ ಸರಿಯಾಗಿ ಧರಿಸದೇ  ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳದೇ ಮಾಮೂಲು ನಗರ ಸಭಾ ಅಧಿವೇಶನ ನಡೆಸುವ ರೀತಿಯಲ್ಲಿ, ಮಾಸ್ಕ್ ಹರಿದುಕೊಂಡು ಡೆಸ್ಕ್ ದೂಡಿಕೊಂಡು ಕೆೈ ಕಾಲು ಅಲ್ಲಾಡಿಸಿ ಕೊಂಡು ಈ ವಿಷಮ ಪಿಡುಗಿನ ಪರಿಸ್ಥಿತಿಯಲ್ಲಿ ಈ ರೀತಿಯಲ್ಲಿ ಸಭೆ ನಡೆಸಿದ್ದಾರೆ ಅಂದರೆ ಇವರಿಗೆ ಯಾರು ಪಾಠ ಹೇಳ ಬೇಕು?


ನಾಳೆ ಬೆಳಿಗ್ಗೆ ಇದೇ ನಗರ ಸಭೆಯವರು ನಮಗೆ ಪಾಠ ಮಾಡಲು ಮನೆ ಮನೆಗೆ ಬರುತ್ತಾರೆ. ಕೊರೊನ ಸಮಸ್ಯೆಯಿಂದಾಗಿ ಸಂಸತ್ತಿನ ಅಧಿವೇಶನ ನಡೆಯದೇ ಮುಂದೆ ಹೇೂಗಿದೆ.  ರಾಜ್ಯಗಳಲ್ಲೂ ಕೂಡಾ ಅಧಿವೇಶನ ಮುಂದೂಡಿದ ಉದಾಹರಣೆ ನಮ್ಮ ಮುಂದಿದೆ.


ಒಂದು ವೇಳೆ ತುತಾ೯ಗಿ ನಗರ ಸಭೆ ಅಧಿವೇಶನ ನಡೆಯ ಬೇಕಂತಿದ್ದರೆ ಸಾಮಾಜಿಕ ಅಂತರ ಮಾಸ್ಕ್ ಸರಿಯಾದ ರೀತಿಯಲ್ಲಿ ಧರಿಸಿ ಕೊಂಡಾದರೂ ಸಭೆ ನಡೆಸಬಹುದಿತ್ತು. ಅದನ್ನೂ ಮಾಡಿಲ್ಲ. "ಬೇಲಿಯೇ ಹೊಲವನ್ನು ಮೆಂದ ಪರಿಸ್ಥಿತಿ "ಇವರಿಗೆ ಯಾರು ಬುದ್ಧಿ ಹೇಳುವುದು ನೀವೇ ಹೇಳಿ?

-ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ

(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم