ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕೂಟ ಮಹಾಜಗತ್ತಿನಿಂದ ಕೊರೋನಾ ಆಹಾರ ಕಿಟ್ ವಿತರಣೆ

ಕೂಟ ಮಹಾಜಗತ್ತಿನಿಂದ ಕೊರೋನಾ ಆಹಾರ ಕಿಟ್ ವಿತರಣೆ


ಪುತ್ತೂರು: ಕೋಟ ಬ್ರಾಹ್ಮಣರ ಒಕ್ಕೂಟವಾದ ಸಾಲಿಗ್ರಾಮದ ಕೂಟಮಹಾಜಗತ್ತು ಸಂಘಟನೆಯ ಪುತ್ತೂರಿನ ಅಂಗಸಂಸ್ಥೆ ವತಿಯಿಂದ ಕೋರೋನಾದಿಂದಾಗಿ ಸಂಕಷ್ಟದಲ್ಲಿರುವ ಸುಮಾರು 76 ಕುಟುಂಬದ ಕೂಟ ಬಂಧುಗಳಿಗೆ ಸಂಸ್ಥೆಯ ಅಧ್ಯಕ್ಷ ನಾಗೇಶ್ ರಾವ್ ನಿವಾಸದಲ್ಲಿ ಆಹಾರಕಿಟ್ ಅನ್ನು ವಿತರಿಸಲಾಯಿತು.  

ಈ ಸಂದರ್ಭದಲ್ಲಿ ಮಾತನಾಡಿದ ನಾಗೇಶ್ ರಾವ್ ಅವರು ಸಂಘದ ಬಂಧುಗಳ ನೆರವಿಗೆ ಒದಗಬೇಕಾದ್ದು ಕೂಟಮಹಾಜಗತ್ತಿನ ಧರ್ಮ. ಸಾಲಿಗ್ರಾಮದಲ್ಲಿರುವ ಸಂಘಟನೆಯ ಕೇಂದ್ರ ಸ್ಥಾನದಿಂದ ಇಂತಹದ್ದೊಂದು ಸಹಕಾರ ಒದಗಿಸಿರುವುದು ಸ್ತುತ್ಯರ್ಹ. ಕೋರೋನಾವನ್ನು ಎದುರಿಸಿ ಬದುಕುವುದು ನಮ್ಮ ತಕ್ಷಣದ ಆದ್ಯತೆಯಾಗಿದ್ದು, ಯಾರೂ ಧೃತಿಗೆಡದೆ ಜೀವನದ ಸವಾಲನ್ನು ಮೀರಿ ನಿಲ್ಲಬೇಕು. ಆದಷ್ಟು ಬೇಗನೆ ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಂಡು ಕೋರೋನಾಮುಕ್ತ ಜಗತ್ತಿಗಾಗಿ ಆಶಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.


ಈ ಸಂದರ್ಭದಲ್ಲಿ ಕೂಟಮಹಾಜಗತ್ತಿನ ಪುತ್ತೂರು ಘಟಕದ ಉಪಾಧ್ಯಕ್ಷ ಸದಾಶಿವ ಹೊಳ್ಳ, ಕಾರ್ಯದರ್ಶಿ ಕೆ ವೆಂಕಟರಮಣ ರಾವ್, ಜತೆ ಕಾರ್ಯದರ್ಶಿ ಸೂರ್ಯನಾರಾಯಣ ಮಯ್ಯ ಹಾಗೂ ಖಜಾಂಚಿ ಕೃಷ್ಣ ಕಾರಂತ್ ಉಪಸ್ಥಿತರಿದ್ದರು.


(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

0 Comments

Post a Comment

Post a Comment (0)

Previous Post Next Post