ಮಂಗಳೂರು: ಆ ಕಡೆ ಕನ್ನಡ ಈ ಕಡೆ ಮಲಯಾಳಂ ನಡುವೆ ತುಳುನಾಡು. ತುಳು, ಕೊಂಕಣಿ, ಬ್ಯಾರಿ, ಕನ್ನಡ ಹೀಗೆ ಹಲವು ಭಾಷೆಗಳ ಸಾಮರಸ್ಯದ ಜಿಲ್ಲೆ ದಕ್ಷಿಣ ಕನ್ನಡ ಜಿಲ್ಲೆಯ ಕೇಂದ್ರ ಸ್ಥಾನ ಸಾಂಸ್ಕೃತಿಕ, ಶೈಕ್ಷಣಿಕ, ಬ್ಯಾಂಕಿಂಗ್ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿರುವ ಬಂದರು ನಗರಿ ಮಂಗಳೂರಿನಲ್ಲಿ ಕರ್ನಾಟಕ ವಿಧಾನಸಭೆಯ ಮುಂದಿನ ಅಧಿವೇಶನ ನಡೆಯಲಿ ಎಂದು ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನ ಟ್ರಸ್ಟ್ ನ ಅಧ್ಯಕ್ಷ ಕಾ.ವೀ. ಕೃಷ್ಣದಾಸ್ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಆಗ್ರಹಿಸಿದ್ದಾರೆ.
ಗಡಿನಾಡು ಕಾಸರಗೋಡನ್ನು ಕರ್ನಾಟಕಕ್ಕೆ ಸೇರಿಸಿಕೊಳ್ಳಬೇಕೆಂಬ ಹಿರಿಯ ಕವಿ ಚೇತನ ದಿವಂಗತ ಕಯ್ಯಾರರ ಹೋರಾಟಕ್ಕೆ ಏನಾದರೂ ಕಾಯಕಲ್ಪ ನೀಡಲು, ಗಡಿಭಾಗದ ಕನ್ನಡಿಗರ, ತುಳುವರ ಶೈಕ್ಷಣಿಕ, ಉದ್ಯೋಗ ಮತ್ತು ಭಾಷಾ ಹೋರಾಟಕ್ಕೆ ರಕ್ಷಣೆ ನೀಡುವ ರಾಜ್ಯ ಸರಕಾರವು ಹೊಣೆಗಾರಿಕೆಯನ್ನು ತೋರಿಸಿಕೊಡಬೇಕಾಗಿದೆ.
ತುಳುವರು ಮತ್ತು ಕನ್ನಡಿಗರ ಮಧ್ಯೆ ಮುಂದೆ ಉಂಟಾಗಬಹುದಾದ ಸಂಘರ್ಷವನ್ನು ತಡೆಯಲು ಸರಕಾರದ ಮಾರ್ಗೋಪಾಯಗಳೇನು ಎಂಬುದನ್ನು ಜಿಲ್ಲೆಯ ಜನರಿಗೆ ಮನವರಿಕೆ ಮಾಡಿಕೊಡಬೇಕು. ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಲು ರಾಜ್ಯ ಸರಕಾರ ತಾನೇ ಮುಂದೆ ನಿಂತು ಕೆಲಸ ಮಾಡುವ ನಿರ್ಣಯ ತೆಗೆದುಕೊಳ್ಳಬೇಕು. ಈ ಬಗ್ಗೆ ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರು ಸರಕಾರದ ಗಮನ ಸೆಳೆಯಬೇಕು ಎಂದು ಅವರು ಪತ್ರಿಕಾ ಪ್ರಕಟಣೆಯ ಮೂಲಕ ಒತ್ತಾಯಿಸಿದ್ದಾರೆ.
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment