ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸುರತ್ಕಲ್‌: ಗದ್ದೆಗಿಳಿದು ನೇಜಿ ನೆಟ್ಟ ಶಾಸಕ ಡಾ.ಭರತ್ ಶೆಟ್ಟಿ ವೈ

ಸುರತ್ಕಲ್‌: ಗದ್ದೆಗಿಳಿದು ನೇಜಿ ನೆಟ್ಟ ಶಾಸಕ ಡಾ.ಭರತ್ ಶೆಟ್ಟಿ ವೈ

 


ಸುರತ್ಕಲ್‌: ಹಡಿಲು ಗದ್ದೆಯಲ್ಲಿ ಕೃಷಿಗೆ ಉತ್ತೇಜನ ನೀಡುತ್ತಿರುವ ಮಂಗಳೂರು ನಗರ ಉತ್ತರ ಶಾಸಕರಾದ ಡಾ. ಭರತ್ ಶೆಟ್ಟಿ ವೈ ಅವರು ಸುರತ್ಕಲ್ ರಥಬೀದಿಯಲ್ಲಿರುವ ಬಾಕಿಮಾರು ಗದ್ದೆಯಲ್ಲಿ ಇಳಿದು ಇತರರೊಂದಿಗೆ ತಾವೂ ನೇಜಿ ನೆಟ್ಟು ಸಂಭ್ರಮಪಟ್ಟರು.


ಈ ಸಂದರ್ಭ ಮಾತನಾಡಿದ ಅವರು, ನಮ್ಮ ಮಣ್ಣಿನ ಸಂಪ್ರದಾಯವನ್ನು ಉಳಿಸುವ ಕೆಲಸವನ್ನು ಸ್ಥಳೀಯರು ಮತ್ತು ಈ ಪ್ರದೇಶದ ದೇವಳಗಳ ಭಕ್ತರು ಮಾಡುತ್ತಿದ್ದು ಇದು ಪ್ರಶಂಸನೀಯ. ಗದ್ದೆಯನ್ನು ಉಳಿಸಿಕೊಂಡು ಮುಂದೆಯೂ ನಿರಂತರವಾಗಿ ಈ ಕಾಯಕ ಇಲ್ಲಿ ಮಾತ್ರವಲ್ಲದೆ ಎಲ್ಲೆಡೆಯೂ ನಡೆಯಬೇಕು ಎಂದು ಹೇಳಿದರು.


ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಈಗಾಗಲೇ ತಾವು ಹಡೀಲು ಭೂಮಿಯನ್ನು ಗುರುತಿಸಿ ಭತ್ತ ನಾಟಿಗೆ ಕ್ರಮಕೈಗೊಂಡಿದ್ದು ಕೃಷಿ ಕಾರ್ಯ ಪ್ರಗತಿಯಲ್ಲಿದೆ. ಇದರ ಜತೆಗೆ ಕೃಷಿ ಕಾರ್ಯಕ್ಕೆ ಎಲ್ಲೆಡೆ ಉತ್ತೇಜನ ಸಿಗುವಂತೆ ಪ್ರೋತ್ಸಾಹವನ್ನು ಸರಕಾರವೂ ನೀಡುತ್ತಿದೆ ಎಂದು ಹೇಳಿದರು.



 ನವದುರ್ಗಾ ಫ್ರೆಂಡ್ಸ್ ಸರ್ಕಲ್, ತ್ರೈರೂಪಿಣಿ ಮಹಿಳಾ ಮಂಡಳಿ ಸದಸ್ಯರು ನಾಟಿ ಕಾಯಕದಲ್ಲಿ ಕೈಜೋಡಿಸಿದರು.


ಈ ಸಂದರ್ಭ ಪುರಾತನ ಶ್ರೀ ಮಾರಿಯಮ್ಮ, ವೀರಭದ್ರ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಸಮಿತಿ ಪದಾಧಿಕಾರಿಗಳು, ಉತ್ತರ ಮಂಡಲ ಬಿಜೆಪಿ ಅಧ್ಯಕ್ಷರಾದ ತಿಲಕ್ ರಾಜ್ ಕೃಷ್ಣಾಪುರ, ಸ್ಥಳೀಯ ಭಾಗದ ಎಲ್ಲ ಮನಾಪ ಸದಸ್ಯರುಗಳು, ಬಿಜೆಪಿ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.


(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post