ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬೆಂಗಳೂರು: ವಿದ್ಯುತ್ ಶಾಕ್- ಇಬ್ಬರು ಕಾರ್ಮಿಕರು ಸಾವು

ಬೆಂಗಳೂರು: ವಿದ್ಯುತ್ ಶಾಕ್- ಇಬ್ಬರು ಕಾರ್ಮಿಕರು ಸಾವು

 


ಬೆಂಗಳೂರು: ಮೂತ್ರ ವಿಸರ್ಜನೆ ವೇಳೆಯಲ್ಲಿ ಕರೆಂಟ್ ಶಾಕ್ ಹೊಡೆದು ಇಬ್ಬರು ಕಾರ್ಮಿಕರು ಸಾವನ್ನಪ್ಪಿದ ಘಟನೆ ಬೆಂಗಳೂರಿನ ಕಲಾಸಿಪಾಳ್ಯದಲ್ಲಿ ನಡೆದಿದೆ. 

ಕರಿಯಪ್ಪ(22) ವರ್ಷ ಹಾಗೂ ನಾಗರಾಜು (19) ವರ್ಷ ದ ಮೃತ ಕಾರ್ಮಿಕರು.  

ಮೃತರು ಮೂಲತಃ ರಾಯಚೂರು ಜಿಲ್ಲೆಯ ಕಾರ್ಮಿಕರಾಗಿದ್ದು, ಒಜಾಸ್ ಕಂಪೆನಿಯಲ್ಲಿ ಕಳೆದ ಒಂದು ವರ್ಷದಿಂದ ಉದ್ಯೋಗದಲ್ಲಿದ್ದರು. ಓಜಾಸ್ ಕಂಪೆನಿ ಮೂಲಕ ರಾಜಕಾಲುವೆ ಸ್ವಚ್ಛಗೊಳಿಸುವ ಕೆಲಸ ಮಾಡಿಕೊಂಡಿದ್ದರು.

ನಿನ್ನೆ ಮಲ್ಲಸಂದ್ರ ಬಳಿಯ ರಾಜಕಾಲುವೆ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ಕಾರ್ಮಿಕರು ಎಚ್ ಎಸ್ ಆರ್ ಲೇಔಟ್ ಮನೆಗೆ ಹೊರಟಿದ್ದರು.  

ಆ ವೇಳೆ ಮೂತ್ರ ವಿಸರ್ಜನೆಗೆ ಹೋದಾಗ, ವಿದ್ಯುತ್ ತಂತಿ ತಗುಲಿ ಕಾರ್ಮಿಕರಿಬ್ಬರೂ ಮೃತಪಟ್ಟಿದ್ದಾರೆ. 

ಮೂತ್ರ ವಿಸರ್ಜನೆ ವೇಳೆ ಗೊತ್ತಿಲ್ಲದೆ ವಿದ್ಯುತ್ ತಂತಿ ಸ್ಪರ್ಶ ಮಾಡಿದ್ದಾರೆ. ವಿದ್ಯುತ್ ತಂತಿ ಹಿಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. 

ಈ ಬಗ್ಗೆ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

0 تعليقات

إرسال تعليق

Post a Comment (0)

أحدث أقدم