ಕಲಬುರಗಿ: 22 ವರ್ಷದ ಯುವಕನೊಬ್ಬನನ್ನು ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಮಾರಕಾಸ್ತ್ರದಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆಯೊಂದು ಕಲಬುರಗಿ ನಗರದ ವಾಜಪೇಯಿ ಬಡಾವಣೆಯ ಸಮೀಪ ನಡೆದಿದೆ.
ಮೃತನನ್ನು ನಿಖಿಲ್ ಕನೇಗಾರ ಎಂಬವನಾಗಿದ್ದು, ಕರುಣೇಶ್ವರ ನಗರ ನಿವಾಸಿಯಾಗಿದ್ದ. ಘಟನೆಯಲ್ಲಿ ನಿಖಿಲ್ ಸೋದರ ಹಾಗೂ ಆತನ ತಾಯಿ ಗಾಯಗೊಂಡಿದ್ದು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ತರಕಾರಿ ಖರೀದಿಸಲು ಬಂದಾಗ ಯುವಕನೊಬ್ಬ ಕ್ಷುಲ್ಲಕ ಕಾರಣಕ್ಕೆ ಜಗಳ ತೆರೆದಿದ್ದು, ಆ ನಂತರ ಸ್ನೇಹಿತರನ್ನು ಕರೆಸಿ ಮಾರಕಾಸ್ತ್ರಗಳಿಂದ ನಿಖಿಲ್ ಮೇಲೆ ಹಲ್ಲೆ ಮಾಡಿದ್ದಾನೆ. ಆ ವೇಳೆ ನಿಖಿಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ನಿಖಿಲ್ ಸಂಬಂಧಿ ಯುವತಿಯೊಬ್ಬಳಿಗೆ ನಿಶ್ಚಿತಾರ್ಥವಿತ್ತು. ಆದರೆ ಆ ಯುವತಿಯನ್ನು ಬೇರೊಬ್ಬ ಯುವಕ ಪ್ರೀತಿಸುತ್ತಿದ್ದ. ಆ ವಿಚಾರವನ್ನು ಪ್ರೀತಿಸುತ್ತಿದ್ದ ಯುವಕ ನಿಶ್ಚಯವಾಗುತ್ತಿದ್ದದ್ದ ಯುವಕನಿಗೆ ಹೇಳಿದ್ದಾಗಿ ಈ ಬಗ್ಗೆ ಇಬ್ಬರ ಕುಟುಂಬದ ನಡುವೆ ಜಗಳ ನಡೆದಿದೆ. ಆ ವೇಳೆ ಜಗಳ ಪರಿಹರಿಸಲು ನಿಖಿಲ್ ಅಲ್ಲಿಗೆ ತೆರಳಿದ್ದನೆನ್ನಲಾಗಿದೆ.
ಆದರೆ ಈ ಬಗ್ಗೆ ಸರಿಯಾದ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಘಟನೆ ಸಂಬಂಧ ಕಲಬುರಗಿ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Visit: Upayuktha Directory- You get here You want
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق