ನರೇಗಾ ಕಾರ್ಮಿಕರಿಗೆ ಕೆಲಸದ ಸ್ಥಳದಲ್ಲೇ ಲಸಿಕೆ: ಕಾರ್ಯನಿರ್ವಾಹಕಾಧಿಕಾರಿ
ಪುತ್ತೂರು: ಜಿಲ್ಲೆಯಲ್ಲೇ ಮೊದಲ ಬಾರಿಗೆ ಉದ್ಯೋಗ ಖಾತರಿ ಯೋಜನೆಯಡಿ ಸಾರ್ವಜನಿಕ ಕೆಲಸ ಮಾಡಿವ ಸಂಜೀವಿನಿ ಒಕ್ಕೂಟದ ಸದಸ್ಯರಿಗೆ ಕೋವಿಡ್ ಲಸಿಕೆಯನ್ನು ನೀಡುವ ಮೂಲಕ ಕೂಲಿಕಾರರಿಗೆ ನರೇಗಾ ಯೋಜನೆಯಡಿ ಕೆಲಸ ಮಾಡುವವರಿಗೆ ಯಾವುದೇ ಆರೋಗ್ಯ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಈ ಲಸಿಕಾ ಅಭಿಯಾನವನ್ನು ಇಂದು ಆರಂಭಿಸಲಾಗಿದೆ ನರೇಗಾದಡಿ ಸಾರ್ವಜನಿಕ ಕಾಮಗಾರಿಯನ್ನು ಮಾಡುವವರಿಗೆ ಲಸಿಕೆ ನೀಡುವುದು ಅಗತ್ಯ ಎಂದು ಪುತ್ತೂರು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಅವರು ತಿಳಿಸಿದರು.
ಅವರು ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಆಲಂತಡ್ಕ ಹಿ.ಪ್ರಾ. ಶಾಲೆಯಲ್ಲಿ ಜೂ. 15 ರಂದು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಸಾರ್ವಜನಿಕ ಕಾಮಗಾರಿಗಳಲ್ಲಿ ತೊಡಗಿರುವ 45 ವರ್ಷ ಮೇಲ್ಪಟ್ಟ ಸಂಜೀವಿನಿ ಸ್ವ ಸಹಾಯ ಗುಂಪಿನ ಸದಸ್ಯರಿಗೆ ತಾಲೂಕು ಪಂಚಾಯತ್ ಪುತ್ತೂರು, ಆರೋಗ್ಯ ಇಲಾಖೆ ಮತ್ತು ಪಂಚಾಯತ್ ವತಿಯಿಂದ ಕೋವಿಡ್ - 19 ಲಸಿಕೆ ಅಭಿಯಾನದಲ್ಲಿ ಮಾತನಾಡಿದರು.
ಕೆಲಸಕ್ಕೆ ಹೋಗುವವರು ಲಸಿಕೆಯನ್ನು ಪಡೆಯಬೇಕಾದರೆ ತುಂಬಾ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಹಾಗಾಗಿ ನರೇಗಾ ದಡಿ ಸಾರ್ವಜನಿಕ ಕೆಲಸ ನಡೆಯುವಲ್ಲಿಯೇ ಕೂಲಿಕಾರರಿಗೆ ಲಸಿಕೆಯನ್ನು ನೀಡಿದರೆ ಉತ್ತಮವೆಂಬ ಉದ್ದೇಶ ನಮ್ಮದಾಗಿದೆ ಎಂದರು.
ನೆಟ್ಟಣಿಗೆ ಮುಡ್ನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ನಿಖಿಲ್, ನೆಟ್ಟಣಿಗೆ ಮುಡ್ನೂರು ಗ್ರಾ.ಪಂ. ಅಧ್ಯಕ್ಷ ರಮೇಶ್ ರೈ ಸಾಂತ್ಯ, ಗ್ರಾ.ಪಂ. ಸದಸ್ಯರಾದ ಇಬ್ರಾಹಿಂ, ಉಪಾಧ್ಯಕ್ಷರಾದ ಫೌಜಿಯಾ ಇಬ್ರಾಹಿಂ, ನರೇಗಾ ಎಂಜಿನಿಯರ್ ವಿನೋದ್ ಕುಮಾರ್, ಐಇಸಿ ಸಂಯೋಜಕ ಭರತ್ ರಾಜ್, ನೆಟ್ಟಣಿಗೆ ಮುಡ್ನೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂದೇಶ್, ಕಾರ್ಯದರ್ಶಿ ರಾಜ್ ಕಮಲ್, ಗ್ರಾಮ ಕರಣಿಕ ರಾಧಾಕೃಷ್ಣ, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಸೇವಂತಿ, ಸಂಜೀವಿನಿ ಒಕ್ಕೂಟದ ಎನ್ ಬಿಕೆ ಬಿಂದು, ಶಾಲಾ ಮುಖ್ಯೋಪಾಧ್ಯಾಯಿನಿ ತುಂಗಮ್ಮ, ಕಿರಿಯ ಆರೋಗ್ಯ ಸಹಾಯಕಿ ರಶ್ಮಿ, ಸಿಬ್ಬಂದಿ ಶೀನಪ್ಪ, ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.
ಉದ್ಯೋಗ ಖಾತರಿಯಡಿ ಕೆಲಸ
ಸಂಜೀವಿನಿ ಒಕ್ಕೂಟದ ಹತ್ತು ಮಹಿಳೆಯರು ಆಲಂತಡ್ಕ ಹಿ.ಪ್ರಾ. ಶಾಲೆ ಆವರಣದಲ್ಲಿ ಸುಮಾರು 50 ಹಣ್ಣಿನ ಗಿಡಗಳನ್ನು, ಸುಮಾರು 80 ಇಂಗು ಗುಂಡಿಯನ್ನು ರಚಿಸುವ ಮೂಲಕ ಮಹಿಳೆಯರು ಸಾರ್ವಜನಿಕ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡು ಆರ್ಥಿಕ ಪ್ರತಿಫಲವನ್ನು ಪಡೆದಿದ್ದಾರೆ.
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق