ಅಥಣಿ : ಒಂದೇ ಕುಟುಂಬದ ನಾಲ್ವರು ಸಹೋದರರು ಕೃಷ್ಣಾ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆಯೊಂದು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದಲ್ಲಿ ಸೋಮವಾರ ಸಂಭವಿಸಿದೆ.
ಹಲ್ಯಾಳ ಗ್ರಾಮದ ಪರಶುರಾಮ ಗೋಪಾಲ ಬನಸೋಡೆ (24), ಧರೆಪ್ಪ ಗೋಪಾಲ ಬನಸೋಡೆ (29), ಸದಾಶಿವ ಗೋಪಾಲ ಬನಸೋಡೆ (22), ಶಂಕರ ಗೋಪಾಲ ಬನಸೋಡೆ (20) ಮೃತ ದುರ್ದೈವಿಗಳು
ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ನಾಲ್ಕು ಮಂದಿ ಸಹೋದರರ ಶವಕ್ಕಾಗಿ ಅಥಣಿ ಪೊಲೀಸರು, ಅಗ್ನಿಶಾಮಕ ದಳ ಹಾಗೂ ಎನ್‌ಡಿಆರ್‌ಫ್ ತಂಡ ಮತ್ತು ಮೀನುಗಾರರು ತೀವ್ರ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ನಾಲ್ವರು ಗಂಡು ಮಕ್ಕಳನ್ನು ಕಳೆದುಕೊಂಡಿರುವ ಕುಟುಂಬ ಇದೀಗ ಆಘಾತದಿಂದ ಆಕ್ರಂದನ ಮುಗಿಲು ಮುಟ್ಟಿದೆ.
Post a Comment