ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ತುಮಕೂರು: ಅತ್ತೆಯನ್ನು ಕೊಲೆ ಮಾಡಿದ ಸೊಸೆ

ತುಮಕೂರು: ಅತ್ತೆಯನ್ನು ಕೊಲೆ ಮಾಡಿದ ಸೊಸೆ

 


ತುಮಕೂರು: ಉಜ್ಜನಕುಂಟೆಯಲ್ಲಿ ಸೊಸೆಯೊಬ್ಬಳು ಅತ್ತೆಯನ್ನು ಕೊಲೆ ಮಾಡಿದ ಕಾರಣ ಇದೀಗ ಸೊಸೆಯನ್ನು ಬಂಧಿಸಲಾಗಿದೆ. 


ತುಮಕೂರು ಜಿಲ್ಲೆ ಶಿರಾ ತಾಲೂಕಿನ ಉಜ್ಜನಕುಂಟೆ ಗ್ರಾಮದ ಸುಧಾಮಣಿ ಅಕ್ರಮ ಸಂಬಂಧ ಹೊಂದಿದ್ದು, ಇದನ್ನು ಪ್ರಶ್ನಿಸಿದ ಕಾರಣ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಅತ್ತೆ ಸರೋಜಮ್ಮ ಅವರನ್ನು ಕೊಲೆ ಮಾಡಿದ್ದಳು ಎನ್ನಲಾಗಿದೆ.


ಜೂನ್ 14 ರಂದು ಸೊಸೆ ಸುಧಾಮಣಿ ಅತ್ತೆ ಸರೋಜಮ್ಮ ಅವರನ್ನು ಕೊಲೆ ಮಾಡಿದ್ದಳು.  ಪೊಲೀಸರು ತನಿಖೆ ನಡೆಸಿದ ಸಂದರ್ಭದಲ್ಲಿ ಕೊಲೆ ವಿಚಾರ ಗೊತ್ತಾಗಿದೆ. 


ಸುಧಾಮಣಿ ಮತ್ತು ಆಕೆಯ ಪ್ರಿಯಕರ ಶ್ರೀರಂಗಪ್ಪ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

0 Comments

Post a Comment

Post a Comment (0)

Previous Post Next Post