ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಲುಬುರ್ಗಿ ;ಕೋವಿಡ್ ಗೆ ತಾಯಿ -ಮಗ ಸಾವು

ಕಲುಬುರ್ಗಿ ;ಕೋವಿಡ್ ಗೆ ತಾಯಿ -ಮಗ ಸಾವು

 


ಕಲಬುರ್ಗಿ:  ,ಮಹಾಮಾರಿ ಕೋವಿಡ್ ಗೆ ಒಂದೇ ದಿನ ತಾಯಿ ಮತ್ತು ಮಗ ಮೃತಪಟ್ಟಿರುವ ಘಟನೆ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ನಡೆದಿದೆ.


ವಾಡಿ ಪಟ್ಟಣದ ಆರ್ ಸಿ ತಾಂಡದ ನಿವಾಸಿಗಳಾಗಿರುವ ಚಾಂದಿಬಾಯಿ ನಾಯಕ್ (74) ಮತ್ತು ಭಜನ್ ನಾಯಕ್(32) ಕರೊನಾಗೆ ಬಲಿಯಾದ ತಾಯಿ-ಮಗ. ಇಬ್ಬರು ಕಲಬುರಗಿ ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಮೃತಪಟ್ಟರು.


ಒಂಬತ್ತು ದಿನಗಳ ಹಿಂದೆ ಚಾಂದಿಬಾಯಿ ಮತ್ತೊಬ್ಬ ಹಿರಿಯ ಪುತ್ರ ಹಾಗೂ ವಾಡಿ ಪುರಸಭೆ ಸದಸ್ಯ ಪ್ರಕಾಶ್ ನಾಯಕ್(46) ವರ್ಷದ ಯುವಕ ಕೊವಿಡ್ ಗೆ ಬಲಿಯಾಗಿದ್ದರು. 


ಇದೀಗ ಇನ್ನೊರ್ವ ಪುತ್ರ ಮಹೇಶ್ ನಾಯಕ್ ಎಂಬುವವರು ಕೂಡಾ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚಿಂತಾಜನಕ ಸ್ಥಿತಿಯಲ್ಲಿದ್ದು, ಕುಟುಂಬಸ್ಥರು ಬೇಸರಗೊಂಡಿದ್ದಾರೆ .

0 تعليقات

إرسال تعليق

Post a Comment (0)

أحدث أقدم