ಪುಂಜಾಲಕಟ್ಟೆ: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆಯಲ್ಲಿ ಇಂದು (ಜೂ.5) ರಾಷ್ಟ್ರೀಯ ಸೇವಾ ಯೋಜನೆ ಮಂಗಳೂರು ವಿಶ್ವವಿದ್ಯಾಲಯ, ರಾಷ್ಟ್ರೀಯ ಸೇವಾಯೋಜನೆ ಘಟಕ 1 ಮತ್ತು 2 ಇದರ ಆಶ್ರಯದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ “ಪರಿಸರ ವ್ಯವಸ್ಥೆಯ ಪುನಃಸ್ಥಾಪನೆ” ಕಾರ್ಯಕ್ರಮವು ಗೂಗಲ್ ಮೀಟ್ ಮಾಧ್ಯಮದಲ್ಲಿ ನಡೆಯಿತು.
ಈ ಕಾರ್ಯಕ್ರಮವು ಪ್ರತಿಯೊಬ್ಬ ವಿದ್ಯಾರ್ಥಿ ಗಿಡ ನೆಡುವ ಮೂಲಕ ಪ್ರಾರಂಭವಾಯಿತು. ರಾಷ್ಟ್ರೀಯ ಸೇವಾ ಯೋಜನೆಯ ಸ್ವಯ೦ಸೇವಕರು 120ಕ್ಕೂ ಹೆಚ್ಚು ಗಿಡಗಳನ್ನು ತಮ್ಮ ತಮ್ಮ ಮನೆಗಳಲ್ಲಿ ನೆಡುವ ಮೂಲಕ ಪರಿಸರದ ಮಹತ್ವವನ್ನು ನೆನೆದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಂಗಳೂರಿನ ಎಚ್. ಶಶಿಧರ ಶೆಟ್ಟಿ, ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ. ಇವರು ಪರಿಸರ ಸಂರಕ್ಷಣೆ ಕುರಿತು “ಮಾನವ ವಿಕಾಸಕಿಂತ ಮೊದಲು ಈ ಭೂಮಿಯಲ್ಲಿ ಪ್ರಕೃತಿ ವಿಕಾಸವಾಗಿದೆ. ಈ ಪ್ರಕೃತಿಯಲ್ಲಿ ಎಲ್ಲದಕ್ಕೂ ಜೀವವಿದೆ. ಪರಿಸರ ದಿನ ಕೇವಲ ಒಂದು ದಿನಕ್ಕೆ ಸೀಮಿತವಾಗಿರಬಾರದು. ಆದುದರಿಂದ ಪರಿಸರವನ್ನು ಉಳಿಸುದು ನಮ್ಮ ಕರ್ತವ್ಯ” ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಸಾಂತಪ್ಪ, ಯುವ ಪರಿವರ್ತಕರು, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಯುವ ಸ್ಪಂದನ ಮಂಗಳೂರು ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಗಣಪತಿ ಭಟ್ ಕುಳಮರ್ವ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಐಕ್ಯೂಎಸಿ ಸಂಚಾಲಕರಾದ ಪ್ರೊ. ರವಿಶಂಕರ್ ಬಿ. ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಯೋಜನೆಯ ಯೋಜನಾದಧಿಕಾರಿಗಳಾದ ಪ್ರೊ. ಸಂತೋಷ್ ಪ್ರಭು ಮತ್ತು ಪ್ರೊ.ಎಚ್ ಎಸ್ ರಾಜೇಶ್ವರಿ ಹಾಗೂ ಕಾಲೇಜಿನ ಪ್ರಾಧ್ಯಾಪಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ರಾಷ್ಟ್ರೀಯ ಸೇವಾಯೋಜನೆಯ ಸ್ವಯಂ ಸೇವಕಿಯಾದ ಕು. ಸ್ಮಿತಾ ಇವರ ನಿರೂಪಿಸಿದರು. ರಶ್ಮಿ ಇವರು ಸ್ವಾಗತಿಸಿ, ಗಣೇಶ ಇವರು ಧನ್ಯವಾದವಿತ್ತರು. ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಸುಮಾರು 95 ಸ್ವಯ೦ಸೇವಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
Visit: Upayuktha Directory- You get here You want
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment