ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಾರಡ್ಕ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ವಿಶ್ವ ಪರಿಸರ ದಿನಾಚರಣೆ

ಕಾರಡ್ಕ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ವಿಶ್ವ ಪರಿಸರ ದಿನಾಚರಣೆ



ಕಾರಡ್ಕ: ಜಿವಿಎಚ್ಎಸ್ಎಸ್ ಕಾರಡ್ಕ ಪ್ರೌಢಶಾಲೆಯ ವಿದ್ಯಾರ್ಥಿಗಳು ತಮ್ಮ ಮನೆಗಳಲ್ಲಿ ಈ ವರ್ಷದ ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು. 

ಹೇಗೆ?: ಮನೆಯ ಪರಿಸರದಲ್ಲಿ ಒಂದು ಹಣ್ಣಿನ (ಮಾವು, ಹಲಸು, ಸೀತಾಫಲ, ಪೇರಳೆ ಇತ್ಯಾದಿ) ಗಿಡವನ್ನು ನೆಟ್ಟರು.

ಕೆಲವರು ನೆಟ್ಟ ಗಿಡದ ಔಷಧೀಯ ಪ್ರಯೋಜನವನ್ನೂ ಹೇಳಿದರು. ಬಳಿಕ ಅಲ್ಲಿಯೇ ನಿಂತು ಕೆಲವರು ಭಾಷಣ ಮಾಡುವ ಮೂಲಕ ಕೌಶಲ್ಯ ತೋರ್ಪಡಿಸಿದರು.

ಇನ್ನು ಕೆಲ ವಿದ್ಯಾರ್ಥಿಗಳು ತಮ್ಮ ಹಿತ್ತಿಲಿನ ವಿವಿಧ ಗಿಡಗಳ ಔಷಧೀಯ ಗುಣಗಳ ಸಹಿತ 'ಸಸ್ಯ ಪರಿಚಯ' ನೀಡಿದರು. ಕೆಲವರು ಕನ್ನಡ, ಹಿಂದಿ, ಇಂಗ್ಲೀಷ್ ಪೋಸ್ಟರ್ಗಳನ್ನು ರಚಿಸಿ ಗಮನಸೆಳೆದರು.


ಇದೆಲ್ಲ ಚಟುವಟಿಕೆಗಳು ತರಗತಿ ವಾಟ್ಸಾಪ್ ಗುಂಪಿನ ಮೂಲಕ ದಿನವಿಡೀ ಹರಿದುಬಂದವು. ಆವಾಸವ್ಯವಸ್ಥೆಯ ಪುನಃಸ್ಥಾಪನೆ ಎಂಬ ಧ್ಯೇಯದೊಂದಿಗೆ ಪರಿಸರ ದಿನಾಚರಣೆ ಅರ್ಥಪೂರ್ಣವಾಯಿತು.

ಶಿಕ್ಷಕವೃಂದವು ಸೂಕ್ತ ಮಾರ್ಗದರ್ಶನ ನೀಡಿತು.

Visit: Upayuktha Directory- You get here You want

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

0 Comments

Post a Comment

Post a Comment (0)

Previous Post Next Post