ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸುಳ್ಯ ಗೃಹರಕ್ಷಕ ದಳ ಕಛೇರಿಯಲ್ಲಿ ವನಮಹೋತ್ಸವ ಮತ್ತು ಸೊಳ್ಳೆ ಪರದೆ ವಿತರಣೆ

ಸುಳ್ಯ ಗೃಹರಕ್ಷಕ ದಳ ಕಛೇರಿಯಲ್ಲಿ ವನಮಹೋತ್ಸವ ಮತ್ತು ಸೊಳ್ಳೆ ಪರದೆ ವಿತರಣೆ



ಸುಳ್ಯ: ಸುಳ್ಯ ಗೃಹರಕ್ಷಕದಳ ಕಛೇರಿಯಲ್ಲಿ ಸ್ಯಾನಿಟೈಸರ್, ಸೊಳ್ಳೆ ಪರದೆ ವಿತರಣೆ ಮತ್ತು ವನಮಹೋತ್ಸವ ಕಾರ್ಯಕ್ರಮ ಭಾನುವಾರ (ಜೂ.20) ಜರುಗಿತು. ಈ ಸಂದರ್ಭದಲ್ಲಿ ಸುಳ್ಯ ಘಟಕದ ಗೃಹರಕ್ಷಕರಿಗೆ ಒಂದೊಂದು ಗಿಡ ವಿತರಿಸಲಾಯಿತು. ಕಛೇರಿಯ ಆವರಣದಲ್ಲಿ ಗಿಡ ನೆಡುವುದರ ಮೂಲಕ ಸಾಂಕೇತಿಕವಾಗಿ ಪರಿಸರ ದಿನವನ್ನು ಆಚರಿಸಲಾಯಿತು.


ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷರಾದ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಇವರು ಮಾತನಾಡಿ, ವಿಶ್ವ ಪರಿಸರ ದಿನ ನಮಗೆಲ್ಲಾ ಅತ್ಯಂತ ಪವಿತ್ರವಾದ ದಿನವಾಗಿದ್ದು, ನಮ್ಮನ್ನು ಪುನ: ಪರಿಸರ ರಕ್ಷಣೆಗೆ ತೊಡಗಿಸಿಕೊಳ್ಳಬೇಕಾದ ದಿನ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ ಮತ್ತು ಪೌರರಕ್ಷಣಾ ದಳ 7 ವರ್ಷಗಳಿಂದ ನಿರಂತರವಾಗಿ ಗಿಡ ನೆಡುವುದರ ಮೂಲಕ ಪರಿಸರ ಸಂರಕ್ಷಣೆಯನ್ನು ಮಾಡುತ್ತಿದೆ ಎಂದು ಅಭಿಪ್ರಾಯಪಟ್ಟರು.


ಈ ಸಂದರ್ಭದಲ್ಲಿ ಗೃಹರಕ್ಷಕರಿಗೆ ಸ್ಯಾನಿಟೈಸರ್ ಮತ್ತು ಸೊಳ್ಳೆ ಪರದೆಯನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಸುಳ್ಯ ಘಟಕದ ಘಟಕಾಧಿಕಾರಿಯಾದ ಜಯಂತ್ ಶೆಟ್ಟಿ, ಹಿರಿಯ ಗೃಹರಕ್ಷಕರಾದ ಪಿ.ಟಿ ಗಿರಿಧರ್ ಮತ್ತು ಸುಮಾರು 25 ಗೃಹರಕ್ಷಕರು ಉಪಸ್ಥಿತರಿದ್ದರು.

(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

0 Comments

Post a Comment

Post a Comment (0)

Previous Post Next Post