ಮಂಗಳೂರು: ನವಮಂಗಳೂರು ಬಂದರಿನ 14ನೇ ಬರ್ತ್ ನಲ್ಲಿ 10 ಚಕ್ರದ ಕಂಟೈನರ್ ಲಾರಿಯೊಂದು ಉರುಳಿ ಸಮುದ್ರಕ್ಕೆ ಬಿದ್ದ ಪರಿಣಾಮ ಅದರಲ್ಲಿದ್ದ ಲಾರಿ ಚಾಲಕ ಸಹಿತ ಇಬ್ಬರು ಸಮುದ್ರ ನೀರು ಪಾಲಾದ ಘಟನೆಯೊಂದು ನಿನ್ನೆ ರಾತ್ರಿ ವೇಳೆ ನಡೆದಿದೆ.
ಚಾಲಕ ರಾಜೇಸಾಬ್ ಹಾಗೂ ಬದಲಿ ಚಾಲಕ ಮಲಕಪ್ಪ ನಾಪತ್ತೆಯಾದವರು. ಚಾಲಕನ ನಿಯಂತ್ರಣ ತಪ್ಪಿ ಕಂಟೇನರ್ ಸಮುದ್ರಕ್ಕೆ ಉರುಳಿದೆ ಎಂದು ತಿಳಿದು ಬಂದಿದೆ.
ಅದರಲ್ಲಿ ಲಾರಿ ಚಾಲಕ ರಾಜೇಸಾಬ್ ಅವರ ಮೃತ ದೇಹ ಪತ್ತೆಯಾಗಿದ್ದು,ಮಲಕಪ್ಪ ಅವರಿಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಣಂಬೂರು ಪೊಲೀಸರು ಘಟನೆ ನಡೆದ ಸ್ಥಳ ಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment