ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸುಳ್ಯ: ಪಟ್ಟಣ ಪಂಚಾಯತ್ ಅಧ್ಯಕ್ಷರೇ ಕಸ ವಿಲೇವಾರಿ ವಾಹನದ ಚಾಲಕ

ಸುಳ್ಯ: ಪಟ್ಟಣ ಪಂಚಾಯತ್ ಅಧ್ಯಕ್ಷರೇ ಕಸ ವಿಲೇವಾರಿ ವಾಹನದ ಚಾಲಕ


ಸುಳ್ಯ: ಇಲ್ಲಿನ ಪಟ್ಟಣ ಪಂಚಾಯಿತಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಅವರು ಕಸ ವಿಲೇವಾರಿ ವಾಹನವನ್ನು ಸ್ವತಃ ತಾವೇ ಚಲಾಯಿಸಿಕೊಂಡು, ಮನೆ-ಮನೆ ಕಸ ಸಂಗ್ರಹ ಮಾಡುವ ಮೂಲಕ ಎಲ್ಲರ ಗಮನ ಸೆಳೆಯುವಂತೆ ಮಾಡಿದ್ದಾರೆ.


ಕೋವಿಡ್ ಕಾರಣದಿಂದ ಪಟ್ಟಣ ಪಂಚಾಯಿತಿಯ ಮೂರು ಮಂದಿ ಕೆಲಸದವರು ಕ್ವಾರಂಟೈನ್‌ನಲ್ಲಿದ್ದು, ಇದರಿಂದಾಗಿ ತ್ಯಾಜ್ಯ ಸಂಗ್ರಹಕ್ಕೆ ಸಿಬ್ಬಂದಿ ಕೊರತೆ ಎದುರಾಗಿದ್ದು, ಈ ಕಾರಣದಿಂದ ಪಟ್ಟಣದ ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ಅಧ್ಯಕ್ಷರು ತಾವೇ ಈ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಅವರಿಗೆ ಆರೋಗ್ಯ ನಿರೀಕ್ಷಕ ಲಿಂಗರಾಜು ಕೂಡ ಪ್ರೋತ್ಸಾಹ ನೀಡಿದ್ದಾರೆ.


ಸುಳ್ಯ ಪಟ್ಟಣ, ಎ.ಪಿ.ಎಂ.ಸಿ ರಸ್ತೆ, ಪದವಿಪೂರ್ವ ಕಾಲೇಜು ರಸ್ತೆ ಮೊದಲಾದ ಕಡೆಗಳ ಕಸ ಸಂಗ್ರಹ ಮಾಡಿದರು. ತ್ಯಾಜ್ಯವನ್ನು ತಂದು ವಾಹನಕ್ಕೆ ಕೊಡುವವರಿಗೆ ಹಸಿ ಕಸ- ಒಣ ಕಸ ಎಂದು ಪ್ರತ್ಯೇಕಿಸುವ ಕುರಿತು ಮಾಹಿತಿ ನೀಡಿದರು.


ನಮ್ಮ ಮೂವರು ಪೌರ ಕಾರ್ಮಿಕರು ಕ್ವಾರಂಟೈನ್‌ನಲ್ಲಿದ್ದಾರೆ. ಸಿಬ್ಬಂದಿ ಕೊರತೆ ಇದೆ. ಈ ಕೊರತೆ ನೀಗಿಸಲು ನಾನೇ ವಾಹನ ಚಲಾಯಿಸಲು ಮುಂದಾಗಿದ್ದೇನೆ. ಕಸವನ್ನು ಮೂಲದಿಂದಲೇ ಬೇರ್ಪಡಿಸುವ ಕುರಿತು ಜನರಿಗೆ ತಿಳಿವಳಿಕೆ ನೀಡುವ ಕಾರ್ಯವನ್ನೂ ಮಾಡುತ್ತಿದ್ದೇನೆ' ಎಂದು ವಿನಯಕುಮಾರ್ ಹೇಳಿದರು.


(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

0 تعليقات

إرسال تعليق

Post a Comment (0)

أحدث أقدم