ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬೆಳ್ತಂಗಡಿಯಿಂದ ಬೆಂಗಳೂರಿಗೆ 'ಶ್ರಮಿಕ ಸಂಪರ್ಕ' ಬಸ್: 3 ವಿಶೇಷ ಬಸ್‌ಗಳಲ್ಲಿ 90 ಮಂದಿ ಪ್ರಯಾಣ

ಬೆಳ್ತಂಗಡಿಯಿಂದ ಬೆಂಗಳೂರಿಗೆ 'ಶ್ರಮಿಕ ಸಂಪರ್ಕ' ಬಸ್: 3 ವಿಶೇಷ ಬಸ್‌ಗಳಲ್ಲಿ 90 ಮಂದಿ ಪ್ರಯಾಣ

ಶಾಸಕ ಹರೀಶ್ ಪೂಂಜಾ ಅವರಿಂದ ಸೌಲಭ್ಯ



ಬೆಳ್ತಂಗಡಿ: ರಾಜ್ಯದ್ಯಾಂತ ಕೋವಿಡ್ ಸೋಂಕು ಪ್ರಕರಣಗಳು ಇಳಿಕೆಯಾದ ಹಿನ್ನಲೆಯಲ್ಲಿ ರಾಜ್ಯದ 8 ಜಿಲ್ಲೆಗಳನ್ನು ಹೊರತುಪಡಿಸಿ ಬಹುತೇಕ ಜಿಲ್ಲೆಗಳು ಅನ್ ಲಾಕ್ ಆಗಿದ್ದು, ರಾಜ್ಯ ರಾಜಧಾನಿ ಬೆಂಗಳೂರು ಕೂಡ ಲಾಕ್ ಡೌನ್ ಮುಕ್ತವಾಗಿದೆ.


ಅಲ್ಲದೇ ಬೆಂಗಳೂರಿನ ಬಹುತೇಕ ಕಂಪೆನಿಗಳು ಪುನರಾರಂಭಗೊಳ್ಳುತ್ತಿದ್ದು, ಲಾಕ್ ಡೌನ್ ನಿಂದ ತವರೂರು ಸೇರಿದ್ದ ಕೆಲಸಗಾರರು ಉದ್ಯೋಗ ನಿಮಿತ್ತ ಮತ್ತೆ ತೆರಳಬೇಕಿದೆ.


ಈ ಹಿನ್ನಲೆಯಲ್ಲಿ ಕೆಲಸಕ್ಕೆ ತೆರಳಲು ಸಂಚಾರ ವ್ಯವಸ್ಥೆ ಇಲ್ಲದೇ ಪರದಾಡುತ್ತಿದ್ದ ತಾಲೂಕಿನ ಉದ್ಯೋಗಿಗಳ ನೆರವಿಗೆ ಶಾಸಕ ಹರೀಶ್ ಪೂಂಜ ಬಂದಿದ್ದು, ಜೂ.14ರಂದು ಶಾಸಕರ ಮುಂದಾಳತ್ವದ 'ಶ್ರಮಿಕ ಸಂಪರ್ಕ' ಮೂಲಕ ಬಸ್ ಸೇವೆಯನ್ನು ಕಲ್ಪಿಸಿ 90 ಜನ ಪ್ರಯಾಣಿಕರನ್ನು ಮೂರು ಬಸ್ ಗಳಲ್ಲಿ ಬೆಂಗಳೂರಿಗೆ ಕಳುಹಿಸಿಕೊಡಲಾಯಿತು.


ಕಳೆದ ಬಾರಿಯೂ ಕೋವಿಡ್ ನಿಬಂಧನೆಗಳು ತೆರವುಗೊಂಡು ರಾಜ್ಯ ಅನ್ ಲಾಕ್ ಆದ ವೇಳೆ ತಾಲೂಕಿನ ಜನರಿಗೆ ಬಸ್ ವ್ಯವಸ್ಥೆ ಮಾಡಿದ್ದರು.


(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

0 Comments

Post a Comment

Post a Comment (0)

Previous Post Next Post