ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸಿಯೋನ್ ಆಶ್ರಮಕ್ಕೆ ಶಾಸಕ ಹರೀಶ್ ಪೂಂಜಾ ಭೇಟಿ: ಕೋವಿಡ್ ಪರಿಸ್ಥಿತಿ ಅವಲೋಕನ

ಸಿಯೋನ್ ಆಶ್ರಮಕ್ಕೆ ಶಾಸಕ ಹರೀಶ್ ಪೂಂಜಾ ಭೇಟಿ: ಕೋವಿಡ್ ಪರಿಸ್ಥಿತಿ ಅವಲೋಕನ

 



ಬೆಳ್ತಂಗಡಿ: ನೆರಿಯದಲ್ಲಿರುವ ಸಿಯೋನ್ ಆಶ್ರಮಕ್ಕೆ ಶಾಸಕ ಹರೀಶ್ ಪೂಂಜಾ ಭೇಟಿ ನೀಡಿ ಪ್ರಸ್ತುತ ಪರಿಸ್ಥಿತಿಯನ್ನು ಅವಲೋಕನ ಮಾಡಿದರು.


ಕೋವಿಡ್ ಸೋಂಕಿತರಾಗಿ ಪ್ರಸ್ತುತ ಧರ್ಮಸ್ಥಳದ ರಜತಾದ್ರಿ ಕೋವಿಡ್ ಕೇರ್ ಸೆಂಟರ್‌ನಿಂದ ಕ್ವಾರಂಟೈನ್ ಅವಧಿಯನ್ನು ಮುಗಿಸಿ ಬಂದ ವ್ಯಕ್ತಿಗಳನ್ನು ಯಾವ ರೀತಿಯಲ್ಲಿ ಆರೈಕೆ ಮಾಡಬೇಕು ಮತ್ತು ಬೇಕಾದ ವ್ಯವಸ್ಥೆಗಳನ್ನು ಹೊಂದಿಸಿ ಕೊಡುವ ನಿಟ್ಟಿನಲ್ಲಿ ಚರ್ಚಿಚೆ ನಡೆಸಿದರು. ಜೊತೆಗೆ ಆಶ್ರಮದಲ್ಲಿರುವ ಸಿಬ್ಬಂದಿಗಳಿಗೆ ಶೀಘ್ರದಲ್ಲಿ ಎರಡನೆ ಡೋಸ್ ವಾಕ್ಸಿನೇಶನ್ ಮಾಡಿಸುವಂತೆ ಸೂಚಿಸಿದರು.


ಈ ಸಂದರ್ಭದಲ್ಲಿ ಕೋರೊನ ನೋಡೆಲ್ ಅಧಿಕಾರಿಯಾಗಿರುವ ವೆಂಕಟೇಶ್, ತಹಶೀಲ್ದಾರ್ ಮಹೇಶ್ ತಾಲೂಕು ವೈದ್ಯಧಿಕಾರಿ. ಕಲಾಮಧು ಹಾಗೂ ವಿಶ್ವಹಿಂದೂ ಪರಿಷತ್ತಿನ ಜಿಲ್ಲಾ ಸಹ ಕಾರ್ಯದರ್ಶಿಗಳಾದ ನವೀನ್ ನೆರಿಯ ಮತ್ತು ಸ್ಥಳೀಯ ಪ್ರತಿನಿಧಿಗಳು ಉಪಸ್ಥಿತರಿದ್ದರು.


(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

0 Comments

Post a Comment

Post a Comment (0)

Previous Post Next Post