ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕನ್ನಡದ ಊರುಗಳ ಹೆಸರು ಮಲಯಾಳೀಕರಣದ ವಿರುದ್ಧ ಕರ್ನಾಟಕ ಗಡಿ ಪ್ರಾಧಿಕಾರಕ್ಕೆ ಮನವಿ

ಕನ್ನಡದ ಊರುಗಳ ಹೆಸರು ಮಲಯಾಳೀಕರಣದ ವಿರುದ್ಧ ಕರ್ನಾಟಕ ಗಡಿ ಪ್ರಾಧಿಕಾರಕ್ಕೆ ಮನವಿ

ಕೇರಳ ಸರಕಾರದ ನಡೆ ವಿರುದ್ಧ ಕ್ರಮಕ್ಕೆ ಆಗ್ರಹ



ಕಾಸರಗೋಡು: ಕಾಸರಗೋಡು ಮತ್ತು ಮಂಜೇಶ್ವರ ತಾಲೂಕುಗಳ ಹಲವಾರು ಗ್ರಾಮಗಳ ಕನ್ನಡದ ಹೆಸರುಗಳನ್ನು ಮಲಯಾಳೀಕರಣ ಮಾಡಲು ಹೊರಟಿರುವ ಕೇರಳ ಸರಕಾರದ ನಡೆಯನ್ನು ಕರ್ನಾಟಕದ ಗಡಿ ಅಭಿವೃದ್ಧಿ ಪ್ರಾಧಿಕಾರ ಆಕ್ಷೇಪಿಸಿದೆ.


ಈ ಸಂಬಂಧ ಕಾಸರಗೋಡು ಮತ್ತು ಮಂಜೇಶ್ವರ ತಾಲೂಕುಗಳ ಹಲವಾರು ಕನ್ನಡಪರ ಸಂಘಟನೆಗಳು ವಿಚಾರವನ್ನು ಗಡಿ ಅಭಿವೃದ್ಧಿ ಪ್ರಾಧಿಕಾರದ ಗಮನಕ್ಕೆ ತಂದಿವೆ.  


ಈ ಹಿನ್ನೆಲೆಯಲ್ಲಿ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಡಾ. ಸಿ.ಸೋಮಶೇಖರ  ಹಾಗೂ ಗಡಿ ಪ್ರಾಧಿಕಾರದ ಕಾರ್ಯದರ್ಶಿಗಳಾದ  ಪ್ರಕಾಶ ಮತ್ತೀಹಳ್ಳಿ ಅವರು ಕರ್ನಾಟಕದ ಮುಖ್ಯ  ಕಾರ್ಯದರ್ಶಿಗಳಾದ ಪಿ. ರವಿಕುಮಾರ್ ಅವರನ್ನು ಇಂದು (ಜೂ.25) ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು. 


ಈ ಭಾಗದ ಗ್ರಾಮಗಳ ಹೆಸರುಗಳನ್ನು ಬದಲಾಯಿಸುವ ಬಗ್ಗೆ ಅಲ್ಲಿನ ಕನ್ನಡ ಪರ ಸಂಘ ಸಂಸ್ಥೆಗಳು ತಮ್ಮ ಅಸಮಾಧಾನವನ್ನು ಸಹ ವ್ಯಕ್ತಪಡಿಸಿರುವ ಅಂಶವನ್ನು ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತರಲಾಯಿತು.


ಹಲವಾರು ದಶಕ ಮತ್ತು ಶತಮಾನಗಳಿಂದ ಬಂದಿರುವ ಗ್ರಾಮಗಳ ಹೆಸರುಗಳನ್ನೂ ಸೂಚಿಸುವ ಕನ್ನಡ ಭಾಷಾ ಸೂಚಕ ನಾಮಫಲಕಗಳನ್ನು ಬದಲಾಯಿಸುವ ಪ್ರಕ್ರಿಯೆಯನ್ನು ಕೈಬಿಡಬೇಕೆಂದು  ಕೇರಳ ಸರಕಾರಕ್ಕೆ ಸೂಚಿಸುವಂತೆ ಮನವಿ ಮಾಡಲಾಗಿದೆ.




ಮನವಿ ಪತ್ರದ ಮುಖ್ಯಾಂಶಗಳು ಹೀಗಿವೆ:


ಕರ್ನಾಟಕದ ಗಡಿಭಾಗದಲ್ಲಿ ಕನ್ನಡ ಭಾಷೆಯನ್ನೇ ಹೆಚ್ಚು ಬಳಸುವಂತಹ ಕನ್ನಡಿಗರಿರುವ ಹಾಗೂ ಅಪಾರ ಭಾಷಾ ಅಭಿಮಾನವುಳ್ಳ ಗಡಿಭಾಗದ ಕೇರಳ ರಾಜ್ಯದಲ್ಲಿರುವ ಪ್ರಖ್ಯಾತ ತಾಣಗಳಾದ ಮಂಜೇಶ್ವರ ಮತ್ತು ಕಾಸರಗೋಡಿನ ಕನ್ನಡ ಸಾಂಸ್ಕೃತಿಕ ಪರಂಪರೆಯನ್ನು ಸೂಚಿಸುವ ಹೆಸರುಗಳನ್ನು ಹೊಂದಿದ್ದ ಕೆಲವು ಹಳ್ಳಿಗಳ ಹೆಸರನ್ನು ಕೇರಳ ಸರ್ಕಾರ ಸ್ಥಳೀಯ ಸಂಸ್ಥೆಗಳು ಬದಲಾಯಿಸುವಂತಹ ಪ್ರಕ್ರಿಯೆ ನಡೆಸುತ್ತಿರುವುದು ನಮ್ಮ ಪ್ರಾಧಿಕಾರದ ಗಮನಕ್ಕೆ ಬಂದಿರುತ್ತದೆ.  


ಕೇರಳ ಸರ್ಕಾರವು ಮಂಜೇಶ್ವರ ಹಾಗೂ ಕಾಸರಗೋಡಿನ ಕೆಲವು ಹಳ್ಳಿಗಳ ಹೆಸರನ್ನು ಬದಲಾಯಿಸಿ ಮಲಯಾಳಂ ಭಾಷೆಯ ಹೆಸರುಗಳನ್ನು ನೀಡಲು ಹೊರಟಿರುವುದು ಆ ಭಾಗದ ಕನ್ನಡಿಗರ ಪರಂಪರಾಗತ ಭಾವನೆಗಳಿಗೆ ಧಕ್ಕೆ ತರುವಂತಾಗಿರುತ್ತದೆ. ಇಂತಹ ಬದಲಾವಣೆಗಳನ್ನು ತರಲು ಪ್ರಯತ್ನಿಸುವ ಮುನ್ನ ಆ ಭಾಗದ ಕನ್ನಡಿಗರ ಅಭಿಪ್ರಾಯವನ್ನು ಅಥವಾ ಅಲ್ಲಿನ ನಾಗರೀಕರ ಅಭಿಪ್ರಾಯವನ್ನು ಕೇಳಿರುವುದಿಲ್ಲ.  


ಈ ಬಗ್ಗೆ ಕರ್ನಾಟಕದ ಗಡಿ ಪ್ರದೇಶ ಅಭಿವೃದ್ಧಿಯ ಅಧ್ಯಕ್ಷರು ಕೇರಳ ಸರ್ಕಾರದ ಮತ್ತು ಲೋಕೋಪಯೋಗಿ ಹಾಗೂ ಕಂದಾಯ ಸಚಿವರಿಗೆ ದಿನಾಂಕ: 24-06-2021 ರಂದು ಪತ್ರ ಬರೆದು ಕನ್ನಡದ ಗ್ರಾಮಗಳ ಹೆಸರುಗಳನ್ನು ಯಾವುದೇ ಕಾರಣಕ್ಕೂ ಬದಲಾಯಿಸಬಾರದೆಂದು ಕೋರಿ ಪತ್ರಗಳನ್ನು ಬರೆದಿರುತ್ತಾರೆ. 


ಕನ್ನಡ ಪ್ರದೇಶದ  ಗ್ರಾಮಗಳ ಹೆಸರು-  ಮಲಯಾಳೀಕರಣದ ಹೆಸರು ಕೆಲವು ಉದಾಹರಣೆಗಳು ಹೀಗಿವೆ:


ಮಧೂರು (ಮಧುರಮ್),  ಮಲ್ಲ (ಮಲ್ಲಮ್), ಕಾರಡ್ಕ (ಕಡಗಮ್), ಬೇಡಡ್ಕ (ಬೇಡಗಮ್), ಪಿಲಿಕುಂಜೆ (ಪಿಲಿಕುನ್ನು), ಆನೆಬಾಗಿಲು (ಆನೆವಾಗಿಲ್), ಮಂಜೇಶ್ವರ (ಮಂಜೇಶ್ವರಮ್), ಹೊಸದುರ್ಗ (ಪುದಿಯಕೋಟ), ಕುಂಬಳೆ (ಕುಂಬ್ಳಾ),  ಸಸಿಹಿತ್ಲು (ತೈವಳಪ್), ನೆಲ್ಲಿಕುಂಜೆ  (ನೆಲ್ಲಿಕುನ್ನು)


(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم