ಪುತ್ತೂರು : ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಇಬ್ಬರು ತೀವ್ರವಾಗಿ ಗಾಯಗೊಂಡ ಘಟನೆಯೊಂದು ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಕುಂಡಾಜೆ ಸೇತುವೆಯಲ್ಲಿ ಜೂನ್ 25 ರ ಶುಕ್ರವಾರ ನಡೆದಿದೆ.
ಕಾರು ಆಲಂಕಾರು ಭಾಗದಿಂದ ಕೊಯಿಲ ಕಡೆಗೆ ಹೋಗುತ್ತಿದ್ದು, ಉಪ್ಪಿನಂಗಡಿ ಕಡೆಯಿಂದ ಕಡಬದ ಕಡೆಗೆ ವೇಗವಾಗಿ ಬರುತ್ತಿದ್ದ ಆಲ್ಟೋ ಕಾರು ನಡುವೆ ಡಿಕ್ಕಿಯಾಗಿ ಜಖಂ ಗೊಂಡಿದೆ.
ಈ ಘಟನೆಯ ಪರಿಣಾಮ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ ಕಡಬ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
إرسال تعليق