ಮಡಂತ್ಯಾರು: ರೋಟರಿ ಕ್ಲಬ್ ಮಡಂತ್ಯಾರು ವತಿಯಿಂದ ಕೋವಿಡ್19 ಮುಂಚೂಣಿ ವಾರಿಯರ್ಸ್ ಗಳಾಗಿ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಗೌರವಧನ ವಿತರಣಾ ಕಾರ್ಯಕ್ರಮ ಮಡಂತ್ಯಾರು ಗ್ರಾಮ ಪಂಚಾಯತಿ ಸಭಾಭವನದಲ್ಲಿ ಜೂ.9ರಂದು ನಡೆಯಿತು.
ಮಡಂತ್ಯಾರು ಗ್ರಾ.ಪಂ. ಅಧ್ಯಕ್ಷೆ ಶಶಿಪ್ರಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದು, ಮುಖ್ಯ ಅತಿಥಿಗಳಾಗಿ ರೋಟರಿ ಕ್ಲಬ್ ನ ಅಧ್ಯಕ್ಷ ಜಯಂತ ಶೆಟ್ಟಿ. ಬಿ. ಗ್ರಾ.ಪಂ. ಉಪಾಧ್ಯಕ್ಷೆ ಸಂಗೀತಾ ಶೆಟ್ಟಿ, ರೋಟರಿ ಕ್ಲಬ್ ನ ನಿಯೋಜಿತ ಅಧ್ಯಕ್ಷ ಕಾಂತಪ್ಪ ಗೌಡ, ಪಂ. ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ. ಜಿ. ಶ್ರೀ ದುರ್ಗಾ ವುಡ್ ಇಂಡಸ್ಟ್ರೀಸ್ ಮಡಂತ್ಯಾರು ಮತ್ತು ಶ್ರೀ ದುರ್ಗಾ ಫರ್ನಿಚರ್ಸ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಪೂಂಜಾಲಕಟ್ಟೆ ಇದರ ಮಾಲಕರಾದ ಉಮೇಶ್ ಶೆಟ್ಟಿ ಉಪಸ್ಥಿತರಿದ್ದರು
ಮಡಂತ್ಯಾರು, ಮಚ್ಚಿನ, ಮಲಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ 18 ಜನ ಆಶಾ ಕಾರ್ಯಕರ್ತೆಯರಿಗೆ ಮತ್ತು ಮಡಂತ್ಯಾರು ಗ್ರಾಮ ಸಹಾಯಕ ಯೋಗೀಶ ಹೆಗ್ಡೆ ಸೇರಿದಂತೆ 19 ಜನರಿಗೆ ತಲಾ 2000 ಸಾವಿರದಂತೆ ಪ್ರೋತ್ಸಾಹ ಧನವನ್ನು ರೋಟರಿ ಕ್ಲಬ್ ಮಡಂತ್ಯಾರು ವತಿಯಿಂದ ಅಧ್ಯಕ್ಷ ಜಯಂತ ಶೆಟ್ಟಿ. ಬಿ. ವಿತರಿಸಿದರು.
ಹಾಗೇ ಕೋವಿಡ್19 ತುರ್ತು ಸೇವೆಗೆ ಗ್ರಾಮ ಪಂಚಾಯತಿಗೆ ಉಚಿತವಾಗಿ ಓಮಿನಿ ವಾಹನವನ್ನು ಶ್ರೀ ದುರ್ಗಾ ವುಡ್ ಇಂಡಸ್ಟ್ರೀಸ್, ಫರ್ನಿಚರ್ಸ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಮಾಲಕರಾದ ಉಮೇಶ್ ಶೆಟ್ಟಿಯವರು ಗ್ರಾಮ ಪಂಚಾಯತಿ ಅಧ್ಯಕ್ಷರ ಮೂಲಕ ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ. ಸದಸ್ಯ ರೋ|ಕಿಶೋರ್ ಕುಮಾರ್ ಶೆಟ್ಟಿ ಮೂಡಯೂರು, ಶೀಲಾವತಿ ಗೌಡ, ಪಂ. ಕಾರ್ಯದರ್ಶಿ ಮೋರ್ಲಿನ್, ರೋಟರಿ ಖಜಾಂಚಿ ನಾರಾಯಣ ಶೆಟ್ಟಿ, ಮೂರು ಗ್ರಾಮ ಪಂಚಾಯತಿಯ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಪಂಚಾಯತಿ ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ. ಜಿ. ಸ್ವಾಗತಿಸಿ, ನಿರೂಪಿಸಿದರು. ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ಕೆ ಕುಕ್ಕಳ ವಂದನಾರ್ಪಣೆ ಗೈದರು. ಸಿಬ್ಬಂದಿಗಳಾದ ಉಮೇಶ್. ಎಂ. ಮತ್ತು ಕಾರ್ತಿಕ್ ಕುಲಾಲ್ ಸಹಕರಿಸಿದರು.
إرسال تعليق