ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಜೋಕಾಲಿಯಲ್ಲಿ ಆಟವಾಡಿ ಸೀರೆ ಉರುಳಾಗಿ ಇಬ್ಬರೂ ಮಕ್ಕಳು ಸಾವು

ಜೋಕಾಲಿಯಲ್ಲಿ ಆಟವಾಡಿ ಸೀರೆ ಉರುಳಾಗಿ ಇಬ್ಬರೂ ಮಕ್ಕಳು ಸಾವು

 



ಕೊಡಗು: ಜೋಕಾಲಿಯಲ್ಲಿ ಆಟ ಎಂದರೆ ಎಲ್ಲರಿಗೂ ಪಂಚ ಪ್ರಾಣ. ಹಾಗೆಯೇ ಈ ಮಕ್ಕಳು ಕೂಡ ಜೋಕಾಲಿಯಲ್ಲಿ ಆಟ ಆಡುವಾಗ ಸೀರೆ ಉರುಳಾಗಿ ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆಯೊಂದು ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಗಣಗೂರಲ್ಲಿ ನಡೆದಿದೆ.

ಅಮ್ಮನ ಸೀರೆಯನ್ನು ಕಟ್ಟಿ ಜೋಕಾಲಿಯಲ್ಲಿ ಆಡುತ್ತಿದ್ದ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಗಣಗೂರಿನ ನಿವಾಸಿ ಕಾರ್ಮಿಕ ರಾಜು ಹಾಗೂ ಜಯಂತಿ ಎಂಬವರ ಪುತ್ರಿ ಮಣಿಕ್ ಶಾ (14) ವರ್ಷ, ಪೂರ್ಣೇಶ್ (12) ವರ್ಷ ಮೃತ ಮಕ್ಕಳು. 

ಮನೆಯಲ್ಲಿ ಇಬ್ಬರೇ ಜೋಕಾಲಿಯಲ್ಲಿ ಆಟ ಆಡುತ್ತಿದ್ದ ವೇಳೆಯಲ್ಲಿ ಈ ಘಟನೆ ಸಂಭವಿಸಿದೆ.

ಅಟವಾಡುತ್ತಿದ್ದಾಗ ಜೋಕಾಲಿ ಉರುಳಾಗಿ ಸುತ್ತಿಕೊಂಡ ಪರಿಣಾಮ ಸ್ಥಳದಲ್ಲಿಯೇ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಕೆಲಸಕ್ಕೆ ತೆರಳಿದ್ದ ತಾತ ರಾಮಣ್ಣ ಮನೆಗೆ ಬಂದು ನೋಡಿದಾಗ ಈ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.

ಅಕ್ಕ-ತಮ್ಮ ಇಬ್ಬರೂ ನೇಣು ಬಿಗಿದ ಸ್ಥಿತಿಯಲ್ಲಿದ್ದರು. ತಕ್ಷಣವೇ ರಾಮಣ್ಣ ಸೀರೆಯನ್ನು ಕತ್ತರಿಸಿ ಮಕ್ಕಳನ್ನು ಕೆಳಗಿಳಿಸಿದ್ದಾರೆ. ಆದರೆ ಈ ವೇಳೆಗಾಗಲೇ ಇಬ್ಬರ ಪ್ರಾಣ ಹೋಗಿತ್ತು.

ಈ ಬಗ್ಗೆ ಸೋಮವಾರಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

0 تعليقات

إرسال تعليق

Post a Comment (0)

أحدث أقدم