ಕಿನ್ನಿಗೋಳಿ: ಮೂಲ್ಕಿ ಮೂಡಬಿದ್ರೆ ಕ್ಷೇತ್ರದಲ್ಲಿ ಪ್ರಾರಂಭಿಕ ಹಂತದಲ್ಲಿ ಸುಮಾರು 200 ಎಕ್ಕರೆ ಹಡಿಲು ಭೂಮಿ ಕೃಷಿ ಮಾಡಲಾಗಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಅವರು ಬಜಪೆ ಸಮೀಪದ ಎಕ್ಕಾರು ವಿಜಯ ಯುವ ಸಂಗಮ (ರಿ) ಎಕ್ಕಾರು ಇದರ ರಜತ ವರ್ಷಾಚರಣೆ ಪ್ರಯುಕ್ತ ಸಿರಿ ಕುರಲ್ ರೈತ ಉತ್ಪಾದಕರ ಸಂಸ್ಥೆ ಎಕ್ಕಾರು ಜೊತೆ ಸೇರಿ ಹಡಿಲು ಭೂಮಿಯನ್ನು ಕೃಷಿ ಮಾಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಯುವ ಪೀಳಿಗೆ ಕೃಷಿಯತ್ತ ಒಲವು ತೋರಿಸಬೇಕು ಕೃಷಿ ಯಾವತ್ತೂ ನಮನ್ನು ಕೈ ಬಿಡಲ್ಲ, ನಮ್ಮ ಹಿರಿಯರು ಕೃಷಿಯನ್ನೆ ನಂಬಿ ಬದುಕಿದವರು, ಕೃಷಿ ಜೊತೆ ನಮ್ಮ ಸಂಸ್ಕೃತಿಯೂ ಬೆಳೆಯುವಂತಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕ ಸುದೀಪ್ ಅಮೀನ್ ಅವರಿಗೆ ಸನ್ಮಾನಿಸಲಾಯಿತು, ಉತ್ತರ ಕರ್ನಾಟಕದಿಂದ ಕೃಷಿ ಕೂಲಿ ಕಾರ್ಮಿಕರನ್ನು ತಂದು ಮೂಲ್ಕಿ ತಾಲೂಕಿನ ಕೃಷಿ ಕೂಲಿ ಕಾರ್ಮಿಕರ ಸಮಸ್ಯೆಯನ್ನು ನೀಗಿಸಿದ ಮಾಂತೇಷ್, ಸಂಸ್ಥೆಯ ಸದಸ್ಯ ವಿಕ್ರಂ ಮಾಡ ಅವರನ್ನು ಗೌರವಿಸಲಾಯಿತು. ಸಂಸ್ಥೆ ವತಿಯಿಂದ ಸುಮಾರು ನಾಲ್ಕು ಎಕ್ಕರೆ ಭತ್ತದ ಗದ್ದೆಯನ್ನು ನಾಟಿ ಮಾಡಲಾಯಿತು.
ಈ ಸಂದರ್ಭ ಎಕ್ಕಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುರೇಖ ರೈ,ಸೂರಿಂಜೆ ಪಂಚಾಯತ್ ಅಧ್ಯಕ್ಷ ಜಿತೇಂದ್ರ ಶೆಟ್ಟಿ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕೆ ಕಸ್ತೂರಿ ಪಂಜ, ಸಿರಿ ಕುರಲ್ ರೈತ ಉತ್ಪಾದಕರ ಸಂಸ್ಥೆ ಎಕ್ಕಾರು ಇದರ ಅಧ್ಯಕ್ಷ ಮುರ ಸದಾಶಿವ ಶೆಟ್ಟಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ, ಈಶ್ವರ್ ಕಟೀಲ್ , ಕೃಷ್ಣ ಶೆಟ್ಟಿ ಮುರ, ವಿಜಯ ಯುವ ಸಂಗಮದ ಅಧ್ಯಕ್ಷ ಆದರ್ಶ್ ಶೆಟ್ಟಿ ಎಕ್ಕಾರು, ಕೃಷಿ ಅಧಿಕಾರಿ ಬಶೀರ್ ಮತ್ತಿತರರು ಉಪಸ್ಥಿತರಿದ್ದರು, ರತ್ನಾಕರ ಶೆಟ್ಟಿ ಎಕ್ಕಾರು ಸ್ವಾಗತಿಸಿ, ರಾಜೇಂದ್ರ ಎಕ್ಕಾರು ಧನ್ಯವಾದ ಸಮರ್ಪಿಸಿದರು.
ಶಾಸಕ ಉಮಾನಾಥ ಕೋಟ್ಯಾನ್ ಗದ್ದೆಗಿಳಿದು ನಾಟಿ ಕಾರ್ಯದಲ್ಲಿ ತೊಡಗಿಕೊಂಡರು, ತಮ್ಮ ಅಂದಿನ ಕಷ್ಟದ ದಿನಗಳ ಜೊತೆ ಕೃಷಿ ಚಟುವಟಿಕೆಗಳಲ್ಲಿ ಜೀವನ ಸಾಗಿಸಿದ ಬಗ್ಗೆಗಿನ ನೆನಪನ್ನು ನಾಟಿ ಮಾಡುತ್ತಲೇ ಯುವ ಜನತೆ ಜೊತೆ ಹಂಚಿಕೊಂಡರು.
ಶಾಸಕರ ಜೊತೆ ಜಿಲಾ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿಜೆಪಿ ಮುಖಂಡ ಈಶ್ವರ್ ಕಟೀಲ್ ನಾಟಿ ಕಾರ್ಯದಲ್ಲಿ ತೊಡಗಿಕೊಂಡರು. ಸುಮಾರು 75 ಮಂದಿ ವಿಜಯ ಯುವ ಸಂಗಮದ ಸದಸ್ಯರು ನಾಟಿ ಕಾರ್ಯದಲ್ಲಿ ಪಾಲ್ಗೊಂಡರು.
Key Words: Paddy cultivation, Fallow land cultivation, ಹಡಿಲು ಭೂಮಿ ಕೃಷಿ, ಭತ್ತದ ಕೃಷಿ,
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق