ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸಿಮೆಂಟ್ ,ಮರಳು, ಸ್ಟೀಲ್ ಇನ್ನಿತರ ಕಟ್ಟಡ ಸಾಮಾಗ್ರಿಗಳ ಬೆಲೆ ಹೆಚ್ಚಳ

ಸಿಮೆಂಟ್ ,ಮರಳು, ಸ್ಟೀಲ್ ಇನ್ನಿತರ ಕಟ್ಟಡ ಸಾಮಾಗ್ರಿಗಳ ಬೆಲೆ ಹೆಚ್ಚಳ

 


ಬೆಂಗಳೂರು: ಜನರು ಮೊದಲೇ ಬೇಸತ್ತು ಹೋಗಿದ್ದು, ಇದೀಗ ಸ್ಟೀಲ್ ಮತ್ತು ಸಿಮೆಂಟ್ ದರವೂ ಬಲು ದುಬಾರಿಯಾಗಿದೆ.


ಸಿಮೆಂಟ್, ಸ್ಟೀಲ್ ಇತರೆ ಕಟ್ಟಡ ಸಾಮಗ್ರಿಗಳ ದರ ಹೆಚ್ಚಾಗಿದ್ದು, ಮನೆ ನಿರ್ಮಿಸುವವರಿಗೆ ಬೆಲೆ ಏರಿಕೆ ತಲೆ ಬಿಸಿಯಾಗಿದೆ. ಇಟ್ಟಿಗೆ, ಮರಳು, ಸ್ಟೀಲ್, ಜಲ್ಲಿ, ಎಂ ಸ್ಯಾಂಡ್ ಸೇರಿದಂತೆ ಕಟ್ಟಡ ನಿರ್ಮಾಣಕ್ಕೆ ಬಳಸುವ ಸಾಮಗ್ರಿಗಳ ಬೆಲೆ ಏರಿಕೆಯಾಗಿದ್ದು, ಜನಸಾಮಾನ್ಯರಿಗೆ ಮಾತ್ರವಲ್ಲ, ಬಿಲ್ಡರ್ ಗಳು, ಗುತ್ತಿಗೆದಾರರು ಕೂಡ ಬೆಲೆ ಏರಿಕೆ ಯಿಂದ ಕಂಗಾಲಾಗಿದ್ದಾರೆ.


ಸ್ಟೀಲ್ ದರ ಒಂದು ಟನ್ ಗೆ 12 ಸಾವಿರ ರೂನಿಂದ 22 ಸಾವಿರ ರೂಪಾಯಿಯಷ್ಟು ಹೆಚ್ಚಾಗಿದೆ. 


42 -44 ಸಾವಿರ ರೂ. ಇದ್ದ ಸ್ಟೀಲ್ ದರ ಈಗ 64 ಸಾವಿರ ರೂ.ವರೆಗೂ ಹೆಚ್ಚಳವಾಗಿದ್ದು, ನಿರ್ಮಾಣ ಕ್ಷೇತ್ರಕ್ಕೆ ಶಾಕ್ ನೀಡಿದೆ. 


ಕಟ್ಟಡ ನಿರ್ಮಾಣ ಸಾಮಗ್ರಿ ದರ ಬಾರಿ ಏರಿಕೆಯಾಗಿರುವುದರಿಂದ ಕಟ್ಟಡ ಇನ್ನಿತರ ನಿರ್ಮಾಣ ಕಾರ್ಯಗಳಿಗೆ ತೊಂದರೆ ಎದುರಾಗಿದೆ ಎಂದು ಹೇಳಲಾಗಿದೆ.

0 Comments

Post a Comment

Post a Comment (0)

Previous Post Next Post