ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಒಂದೇ ಕುಟುಂಬದ ಮೂವರು ಮಕ್ಕಳು ಶವವಾಗಿ ಕೆರೆಯಲ್ಲಿ ಪತ್ತೆ

ಒಂದೇ ಕುಟುಂಬದ ಮೂವರು ಮಕ್ಕಳು ಶವವಾಗಿ ಕೆರೆಯಲ್ಲಿ ಪತ್ತೆ

 


ಉತ್ತರ ಪ್ರದೇಶ: ಜಾನ್ಪುರದ ಕೆರೆಯೊಂದರಲ್ಲಿ ಒಂದೇ ಕುಟುಂಬದ ಮೂರು ಮಕ್ಕಳ ಮೃತ ದೇಹಗಳು ಪತ್ತೆಯಾಗಿವೆ. ಈ ಮಕ್ಕಳನ್ನು ಕೊಲೆ ಮಾಡಲಾಗಿದೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.


ರಂಜೀತ್‌ (11), ವೀರು (12) ಮತ್ತು ಸಮೀರ್‌ (12) ವರ್ಷದ ಈ ಮಕ್ಕಳು ಇಲ್ಲಿನ ಜಹ್ರುದ್ದೀನ್ ಗ್ರಾಮದವರಾಗಿದ್ದು, ಬುಧವಾರ ಮಧ್ಯಾಹ್ನ 3 ಗಂಟೆ ವೇಳೆಗೆ ಮನೆಯಿಂದ ಹೊರಗೆ ಹೋದವರು ಸಂಜೆಯಾದರೂ ಮರಳಲಿಲ್ಲ ಇದರಿಂದಾಗಿ ಮನೆಯವರು ಹುಡುಕಾಟ ಆರಂಭಿಸಿದ್ದರು.


 ಆದರೆ ಸಂಜೆ  ವೇಳೆಗಾಗಲೇ 6:30 ಗಂಟೆ ಸುಮಾರಿಗೆ ಬಾಲಕರ ಮೃತ ದೇಹಗಳು ಪತ್ತೆಯಾಗಿವೆ.


ಇದೀಗ ಮಕ್ಕಳು ಕೆರೆಯಲ್ಲಿ ಮುಳುಗಿ ಸತ್ತಿರಬಹುದೆಂದು ಶಂಕಿಸಿರುವ ಪೊಲೀಸರು, ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದು, ಬಾಲಕರ ಸಾವಿಗೆ ಕಾರಣವೇನೆಂದು ಸ್ಪಷ್ಟವಾಗಿ ಮಾಹಿತಿ ತಿಳಿಯಬೇಕಾಗಿದೆ ಎಂದಿದ್ದಾರೆ.

0 Comments

Post a Comment

Post a Comment (0)

Previous Post Next Post