ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಹಾಸನ: ಎರಡು ವರ್ಷದ ಮಗುವಿನ ಜೊತೆಗೆ ತಾಯಿ ಆತ್ಮಹತ್ಯೆ

ಹಾಸನ: ಎರಡು ವರ್ಷದ ಮಗುವಿನ ಜೊತೆಗೆ ತಾಯಿ ಆತ್ಮಹತ್ಯೆ



ಹಾಸನ: ಪೋಷಕರು ಎರಡನೇ ಮದುವೆ ಮಾಡಿದರೆಂದು ಮನನೊಂದ ಯುವತಿಯೊಬ್ಬಳು ತನ್ನ ಮಗುವಿನೊಂದಿಗೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸಕಲೇಶಪುರ ತಾಲೂಕಿನ ಆನೇಮಹಲ್​ನಲ್ಲಿ ನಡೆದಿದೆ.


ಪ್ರಜ್ವಲ (26) ವರ್ಷದ ಯುವತಿ, ಸಾಧ್ವಿ (2) ವರ್ಷದ ಮಗು. ಮೃತ ಪ್ರಜ್ವಲ ಅವರ ಮೊದಲ ಪತಿ ಸುರೇಂದ್ರ ಎಂಬಾತ ಕೆಲ ಸಮಯದ ಹಿಂದೆ ಅಪಘಾತದಲ್ಲಿ ಸಾವನ್ನಪ್ಪಿದ್ದರು.


ಪ್ರಜ್ವಲ‌ ಈ‌ ಆಘಾತದಿಂದ ಹೊರಬಂದಿರಲಿಲ್ಲ. ಆದರೆ ಪ್ರಜ್ವಲ‌ ಪೋಷಕರು ಮಗಳ ಜೀವನ ಸರಿ ಹೋಗಲಿ ಎಂದು ಆನೆಮಹಲ್ ಗ್ರಾಮದ ವ್ಯಕ್ತಿಯೊಂದಿಗೆ ಜೂನ್​ 16ರಂದು ಎರಡನೇ ವಿವಾಹ ಮಾಡಿದರು.


ಇದರಿಂದ ಮನನೊಂದ ಮಹಿಳೆ ಮಗುವಿಗೆ ನೇಣು ಬಿಗಿದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸಕಲೇಶಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

0 Comments

Post a Comment

Post a Comment (0)

Previous Post Next Post