ರಾಯಚೂರು: ಸಾವು ಯಾವ ರೀತಿ ಬರಬಹುದೆಂದು ಊಹಿಸಲೂ ಅಸಾಧ್ಯ. ಆದರೆ ಇಲ್ಲೊಂದು ದುರಂತ ಸಂಭವಿಸಿದೆ. ಕಾರನ್ನು ರಿವರ್ಸ್ ತೆಗೆಯುವಾಗ ಮಗುವಿನ ಮೇಲೆ ಬೊಲೆರೋ ಕಾರು ಹರಿದು 5 ವರ್ಷದ ಮಗು ಮೃತಪಟ್ಟ ಘಟನೆ ರಾಯಚೂರು ಜಿಲ್ಲೆಯಲ್ಲಿ ಸಂಭವಿಸಿದೆ.
ಲಿಂಕನ್ ದೊಡ್ಡಿ ಗ್ರಾಮದಲ್ಲಿ ಶುಕ್ರವಾರ ಸಂಜೆಯ ವೇಳೆಯಲ್ಲಿ ಮನೆ ಮುಂದೆ ಆಟವಾಡುತ್ತಿದ್ದ ವೀರೇಶ ಎಂಬುವವರ ಪುತ್ರ ಸಿದ್ಧಾರ್ಥ (5) ವರ್ಷದ ಮೃತಪಟ್ಟ ಬಾಲಕ.
ಚಾಲಕ ಬೊಲೆರೋ ಕಾರನ್ನು ರಿವರ್ಸ್ ತೆಗೆಯುವಾಗ ಆಟ ಆಡುತ್ತಿದ್ದ ಮಗುವನ್ನು ಗಮನಿಸದೇ ಮೇಲೆ ಹರಿಸಿದ್ದಾನೆ. ಇದರಿಂದ ಸ್ಥಳದಲ್ಲೇ ಮಗು ಮೃತಪಟ್ಟಿದ್ದು, ಚಾಲಕ ರಾಮ ನಾಯಕ್ ಬೊಲೇರೋ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ.
ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಇಡಪನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಬೊಲೆರೋ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
Post a Comment