ಬೆಂಗಳೂರು: ಮಾಜಿ ಸಚಿವ, ನಿವೃತ್ತ ಪ್ರೊಫೆಸರ್ ಮಮ್ತಾಜ್ ಅಲಿ ಖಾನ್ (94) ಸೋಮವಾರ ಮುಂಜಾನೆ ನಿಧನರಾಗಿದ್ದಾರೆ.
ಬೆಂಗಳೂರಿನ ಗಂಗಾನಗರ ನಿವಾಸದಲ್ಲಿ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಖಾನ್ ಮೃತಪಟ್ಟಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿ ಯನ್ನು ಅಗಲಿದ್ದಾರೆ.
2008ರಲ್ಲಿ ಬಿ.ಎಸ್. ಯಡಿಯೂರಪ್ಪ ಅವರ ಸಂಪುಟದಲ್ಲಿ ಅಲ್ಪಸಖ್ಯಾತ ಕಲ್ಯಾಣ, ಹಜ್ ವಕ್ಫ್ ಖಾತೆ ಸಚಿವರಾಗಿ ಸೇವೆ ಸಲ್ಲಿಸಿದ್ದರು.
ಅದಕ್ಕೆ ಮುನ್ನ ಅವರು ಬೆಂಗಳೂರು ಕೃಷಿ ವಿವಿಯಲ್ಲಿ ಸಮಾಜಶಾಸ್ತ್ರ ಪ್ರೊಫೆಸರ್ ಆಗಿ ಸಹ ಕೆಲಸ ಮಾಡಿದ್ದರು.
ಮೃತಪಟ್ಟಿರುವ ತಮ್ಮ ಪುತ್ರನ ಹೆಸರಲ್ಲಿ ಆರ್.ಟಿ. ನಗರದಲ್ಲಿ ಮೂರು ದಶಕಗಳ ಕಾಲ ಶಾಲೆ ನಡೆಸುತ್ತಿದ್ದ ಖಾನ್ ತಮ್ಮ ಶಾಲೆಯಲ್ಲಿ ಮಕ್ಕಳಿಗೆ ಉಚಿತ ಶಿಕ್ಷಣ, ಮಧ್ಯಾಹ್ನದ ಬಿಸಿಯೂಟ ಸಹಿತ ಪಠ್ಯಪುಸ್ತಕ ಹಾಗೂ ಸಮವಸ್ತ್ರಗಳನ್ನು ವಿತರಿಸುತ್ತಿದ್ದರು.
ಮೃತರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ ನಗರದ ಅರಮನೆ ರಸ್ತೆಯಲ್ಲಿನ ಖುದ್ದೂಸ್ ಸಾಹೇಬ್ ಖಬರ್ ಸ್ಥಾನದಲ್ಲಿ ನೆರವೇರಲಿದೆ ಎಂದು ಮೂಲಗಳು ತಿಳಿಸಿವೆ.
Visit: Upayuktha Directory- You get here You want
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق