ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನೆಲ್ಯಾಡಿ: ಫರ್ನೇಸ್ ಆಯಿಲ್‌ ಅಕ್ರಮ ದಾಸ್ತಾನು ಅಡ್ಡೆಗೆ ದಾಳಿ, 35,21,400 ರೂ ಮೌಲ್ಯದ ಸೊತ್ತು ವಶ

ನೆಲ್ಯಾಡಿ: ಫರ್ನೇಸ್ ಆಯಿಲ್‌ ಅಕ್ರಮ ದಾಸ್ತಾನು ಅಡ್ಡೆಗೆ ದಾಳಿ, 35,21,400 ರೂ ಮೌಲ್ಯದ ಸೊತ್ತು ವಶ



ನೆಲ್ಯಾಡಿ:  ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ 10,500 ಲೀಟರ್ ಫರ್ನೇಸ್‌ ಆಯಿಲ್ ಸಹಿತ ಒಟ್ಟಾರೆ 35,21,400 ರೂ ಮೌಲ್ಯದ ಸೊತ್ತುಗಳನ್ನು ಉಪ್ಪಿನಂಗಡಿ ಪೊಲೀಸರು ಮಂಗಳವಾರ ವಶಪಡಿಸಿಕೊಂಡಿದ್ದಾರೆ.


ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 75ರ ಮಣ್ಣಗುಂಡಿ ಎಂಬಲ್ಲಿ ಈ ಘಟನೆ ನಡೆದಿದೆ. ಅಕ್ರಮವಾಗಿ ಫರ್ನೇಸ್ ಆಯಿಲ್ ದಾಸ್ತಾನು ಮತ್ತು ಕಳ್ಳ ವ್ಯವಹಾರ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ, ಪುತ್ತೂರು ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಗಾನ ಪಿ. ಕುಮಾರ್ ಅವರು ಸ್ವಯಂ ದೂರು ದಾಖಲಿಸಿಕೊಂಡು ಈ ದಾಳಿ ಕಾರ್ಯಾಚರಣೆ ನಡೆಸಿದ್ದಾರೆ.


ತಮಿಳುನಾಡು ಮೂಲದ ರಘುನಾಥನ್, ಮುತ್ತು ಪಾಂಡಿ, ಜಿ. ದಾಸ್‌, ಸಿಂಗರಾಜ್‌, ಎಸ್‌. ಕಾರ್ತಿ ಮತ್ತು ಸೆಲ್ವರಾಜ್ ಎಂಬ 6 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.


ಕೌಕ್ರಾಡಿ ಗ್ರಾಮದ ಮಣ್ಣಗುಂಡಿಯ ತಾರಸಿ ಮನೆಯೊಂದರ ಹಿಂಭಾಗದಲ್ಲಿ ಅಕ್ರಮವಾಗಿ ಟ್ಯಾಂಕರ್‌ಗಳಿಂದ ಫರ್ನೇಸ್‌ ಆಯಿಲ್‌ಗಳನ್ನು ಕಳ್ಳತನ ಮಾಡಿ ದಾಸ್ತಾನು ಮಾಡಿ ಇಟ್ಟಿರುವುದಾಗಿ ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.


ಈ ಹಿನ್ನೆಲೆಯಲ್ಲಿ ಪುತ್ತೂರು ನಗರ ಠಾಣಾ ಪಿಎಸ್‌ಐ ಮತ್ತು ಸಿಬ್ಬಂದಿಗಳು ಹಾಗೂ ಉಪ್ಪಿನಂಗಡಿ ಠಾಣೆ ಪಿಎಸ್‌ಐ ಮತ್ತು ಸಿಬ್ಬಂದಿಗಳ ತಂಡ ಜಂಟಿ ಕಾರ್ಯಾಚರಣೆ ನಡೆಸಿದೆ. ಆ ವೇಳೆಗೆ ಸ್ಥಳದಲ್ಲಿ ತಮಿಳುನಾಡು ನೋಂದಣಿಯ ಎರಡು ಟ್ಯಾಂಕರ್‌ಗಳು ನಿಂತಿದ್ದು, ನಾಲ್ವರು ಪಂಪ್‌ ಮೂಲಕ ಫರ್ನೇಸ್‌ ಆಯಿಲ್‌ ಅನ್ನು ನೆಲದಡಿಯ ಟ್ಯಾಂಕಿಗೆ ವರ್ಗಾಯಿಸುತ್ತಿದ್ದರು.


ಪೊಲೀಸರನ್ನು ಕಂಡು ಪರಾರಿಯಾಗಲು ಯತ್ನಿಸಿದವರನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ಮುತ್ತು ಪಾಂಡಿ ಮತ್ತು ರಘುನಾಥನ್‌ ಜತೆ ಸೇರಿಕೊಂಡು ಮಂಗಳೂರು-ಬೆಂಗಳೂರು ಮಾರ್ಗವಾಗಿ ಸಾಗುವ ಕೆಲವು ಫರ್ನೇಸ್ ಆಯಿಲ್‌ ಟ್ಯಾಂಕರ್ ಚಾಲಕರ ಜತೆ ಹಣಕ್ಕಾಗಿ ಒಪ್ಪಂದ ಮಾಡಿಕೊಂಡು, ಮಾಲೀಕರ ಗಮನಕ್ಕೆ ತಾರದೇ ಈ ವಂಚನೆ ದಂಧೆ ನಡೆಯುತ್ತಿತ್ತು ಎಂದು ತಿಳಿದುಬಂದಿದೆ.


ಹೀಗೆ ಕಳ್ಳದಾಸ್ತಾನು ಮಾಡಿಟ್ಟ ಫರ್ನೇಸ್ ಆಯಿಲನ್ನು ಟ್ಯಾಂಕರ್‌ ಮೂಲಕ ಚೆನ್ನೈ ಕಡೆಗೆ ಸಾಗಾಟ ಮಾಡಲಾಗಿದೆ ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ.


ಕೃತ್ಯಕ್ಕೆ ಬಳಸಿದ ವಿದ್ಯುತ್ ಮತ್ತು ಡೀಸೆಲ್ ಚಾಲಿತ ಎರಡು ಪಂಪ್‌ ಸೆಟ್‌ಗಳು, ಆಯಿಲ್ ಮಿಶ್ರಣಕ್ಕೆ ಬಳಸುತ್ತಿದ್ದ ಸಲಕರಣೆಗಳು, ಕೆಲವು ದಾಖಲೆ ಪತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.


(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



0 تعليقات

إرسال تعليق

Post a Comment (0)

أحدث أقدم