ಮಂಗಳೂರು: ಸಕ್ಷಮ. ದ. ಕನ್ನಡ ಜಿಲ್ಲಾ ಘಟಕದ ವತಿಯಿಂದ ಕೋವಿಡ್-19 ಲಾಕ್ ಡೌನ್ ನಿಂದ ಆರ್ಥಿಕ ಸಂಕಷ್ಟಕ್ಕೂಳಗಾದ ದಿವ್ಯಾ0ಗ ಬಂಧುಗಳಿಗೆ ಸಕ್ಷಮ ಕರ್ನಾಟಕ ಕೋವಿಡ್-19 ರಿಲೀಫ್ ರೇಷನ್ ಕಿಟ್ ಗಳನ್ನು ತಾರೀಖು 12/06/2021 ಶನಿವಾರ ಮಂಗಳೂರಿನ ರಥ ಬೀದಿ ರಸ್ತೆಯಲ್ಲಿರುವ ಚೇತನಾ ಬಾಲ ವಿಕಾಸ ಕೇಂದ್ರದಲ್ಲಿ ವಿತರಿಸಲಾಯಿತು. ಮಂಗಳೂರು ನಗರದ ಸುಮಾರು ನೂರಕ್ಕೂ ಅಧಿಕ ದಿವ್ಯಾಂಗ ಬಂಧುಗಳಿಗೆ ಇದನ್ನು ಆಯೋಜಿಸಲಾಯಿತು. ದ.ಕ ಜಿಲ್ಲಾ ಘಟಕದ ಅಧ್ಯಕ್ಷರಾದ ವಿ. ಮುರಳಿದರ್ ನಾಯಕ್ ರವರು ರೇಷನ್ ಕಿಟ್ ಹಸ್ತಾಂತರಿಸಿದರು.
ಈ ಕಾರ್ಯಕ್ರಮದಲ್ಲಿ ಸಕ್ಷಮ ಕರ್ನಾಟಕ ಉಪಾಧ್ಯಕ್ಷರಾದ ವಿನೋದ್ ಶೆಣೈ ರವರು, ಸಕ್ಷಮ ದ.ಕ ಜಿಲ್ಲಾ ಘಟಕದ ಕಾರ್ಯದರ್ಶಿಗಳಾದ ಹರೀಶ್ ಪ್ರಭು ಹಾಗೂ ಪದಾಧಿಕಾರಿಗಳಾದ ಕಾಕುಂಜೆ ರಾಜಶೇಖರ್ ಭಟ್ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ನೆರವೇರಿಸಿದರು.
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
إرسال تعليق