ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸದಸ್ಯ ಬೆಳೆಗಾರರ ಮನೆಯ ಕೆಲಸಗಾರರಿಗೂ ಕ್ಯಾಂಪ್ಕೋ ನೆರವು

ಸದಸ್ಯ ಬೆಳೆಗಾರರ ಮನೆಯ ಕೆಲಸಗಾರರಿಗೂ ಕ್ಯಾಂಪ್ಕೋ ನೆರವು

'ಕ್ಯಾಂಪ್ಕೋ ಚಿತ್ತ ಸದಸ್ಯರ ಆರೋಗ್ಯದತ್ತ'



ಬದಿಯಡ್ಕ: `ಕ್ಯಾಂಪ್ಕೋ ಚಿತ್ತ ಸದಸ್ಯರ ಆರೋಗ್ಯದತ್ತ' ಎಂಬ ಧ್ಯೇಯದೊಂದಿಗೆ ತನ್ನ ಸದಸ್ಯರ ಮನೆಯ ಕೆಲಸಗಾರರ ಕುಟುಂಬಕ್ಕೂ ಕ್ಯಾಂಪ್ಕೋ ನೆರವಿನ ಹಸ್ತವನ್ನು ಚಾಚಿದೆ. ಈ ನಿಟ್ಟಿನಲ್ಲಿ ತನ್ನ ಸದಸ್ಯರಾದ ಬೆದ್ರಂಪಳ್ಳದ ಕುಮುದಾಕ್ಷಿ ಎಂಬವರ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಅಪಘಾತದಲ್ಲಿ ನಿಧನರಾದ ಕುಕ್ಕಿಲ ಚನಿಯಪ್ಪ ಪೂಜಾರಿಯವರ ಕುಟುಂಬಕ್ಕೆ ಕ್ಯಾಂಪ್ಕೋ ವತಿಯಿಂದ ರೂಪಾಯಿ 50,000ವನ್ನು ನೀಡಲಾಯಿತು. ಅವರ ಪತ್ನಿ ರೂಪಲತಾ ಚೆಕ್ ಅನ್ನು ಪಡೆದುಕೊಂಡರು.


ಕ್ಯಾಂಪ್ಕೋ ಉಪಾಧ್ಯಕ್ಷ ಶಂಕರನಾರಾಯಣ ಖಂಡಿಗೆ ಚೆಕ್ ಹಸ್ತಾಂತರಿಸಿದರು. ನಿರ್ದೇಶಕರುಗಳಾದ ಬಾಲಕೃಷ್ಣ ರೈ, ಪದ್ಮರಾಜ ಪಟ್ಟಾಜೆ, ಡಾ. ಜಯಪ್ರಕಾಶ ನಾರಾಯಣ, ರಾಧಾಕೃಷ್ಣನ್ ಕೆ.,ಸತ್ಯನಾರಾಯಣ ಪ್ರಸಾದ್, ಸುರೇಶ್ ಕುಮಾರ್ ಶೆಟ್ಟಿ ಪಿ., ಸ್ಥಾನೀಯ ಪ್ರಬಂಧಕ ಗಿರೀಶ್ ಕಾನತ್ತೂರು, ಬದಿಯಡ್ಕ ಶಾಖಾ ಪ್ರಬಂಧಕ ದಿನೇಶ್ ಕುಮಾರ್, ಸಿಬ್ಬಂದಿ ಸುರೇಶ್ ಶೆಟ್ಟಿ ಪರಂಕಿಲ ಜೊತೆಗಿದ್ದರು.

(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

0 تعليقات

إرسال تعليق

Post a Comment (0)

أحدث أقدم