ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಶ್ರದ್ಧೆ-ನಂಬಿಕೆಗೆ ಇಂಬು ಕೊಡುವ ಪೆರಡಾಲದ ಕುಟ್ಟಿಚ್ಚಾತ್ತನ್ ದೈವ

ಶ್ರದ್ಧೆ-ನಂಬಿಕೆಗೆ ಇಂಬು ಕೊಡುವ ಪೆರಡಾಲದ ಕುಟ್ಟಿಚ್ಚಾತ್ತನ್ ದೈವ


 


ಇತ್ತೀಚೆಗೆ ಪೆರಡಾಲ, ಬದಿಯಡ್ಕ, ಪೆರ್ಲ, ಪೆರ್ಮುದೆ ಸುತ್ತುಮುತ್ತಲಿನ ಪರಿಸರದಲ್ಲಿ ದನಗಳ್ಳತನ ಜೋರಾಗಿತ್ತು. ಊರವರಿಗೆ ಹಟ್ಟಿಯಲ್ಲಿ ಕಟ್ಟಿದ ದನಗಳನ್ನು ಸಹ ಉಳಿಸುವ ಸಲುವಾಗಿ ಹಗಲು ರಾತ್ರಿ ಕಾಯುವಂತಾಯಿತು. ಅದಕ್ಕೆ ಊರವರೆಲ್ಲ ಸೇರಿ ಕಾಸರಗೋಡು ತಾಲೂಕು ಪೆರಡಾಲದ ಕುಟ್ಟಿಚ್ಚಾತ್ತನ್‍ (ಪುಟ್ಟ ತುಂಟ ದೆವ್ವ) ದೈವದ ಮೊರೆಹೋದರು. ಮೊರೆಹೋದದ್ದೇ ನೋಡಿ...

ದನ ಕಳ್ಳರು, ಒಬ್ಬೊಬ್ಬರಾಗಿಯೇ ಆಕ್ಸಿಡೆಂಟ್ಗೆ/ಅಪಘಾತಗಳಿಗೆ ಒಳಗಾಗಿ ಪೊಲೀಸ್ ಅತಿಥಿಯಾಗಿ ವಿಚಾರಣೆ ವೇಳೆ ತಮ್ಮೆಲ್ಲ ತಪ್ಪುಗಳನ್ನು ಒಪ್ಪಿಕೊಳ್ಳುವಂತೆ ಮಾಡುತ್ತದೆ..!

ಇದು ಉತ್ಪ್ರೇಕ್ಷೆ ಅಲ್ಲ... ಭಕ್ತ ಜನರ ದೃಢ ಸಂಕಲ್ಪ ಹಾಗೂ ನಂಬಿಕೆಯ ಫಲವೆಂದು ನಿದರ್ಶನ ಸಮೇತ ತಿಳಿದವರು ಸಮರ್ಥಿಸುತ್ತಾರೆ.

ಇದು ನಂಬಲರ್ಹವಾದ ವಿಚಾರವೇ ಎಂಬಂತೆ ನಮ್ಮಲ್ಲಿಯೂ ನಾವು ಯಾವುದೇ ವಸ್ತುಗಳು- ಉದಾಹರಣೆಗೆ: ಬೀಗದ ಕೀ, ಪರ್ಸ್, ಮೊಬೈಲ್, ಬ್ಯಾಗ್,ಪುಸ್ತಕ, ಪೆನ್ನು, ಮನೆಯಲ್ಲಿ ಚೂರಿ, ಕತ್ತಿ ಇತ್ಯಾದಿ ಕಾಣೆಯಾದಾಗ ಮೊದಲು ಕುಟ್ಟಿಚ್ಚಾತ್ತನ್‍ ದೈವವನ್ನು ಮನದಲ್ಲಿ ನೆನೆದು ಹುಡುಕಿ ಕೊಡುವಂತೆ ಮನಃಪೂರ್ವಕವಾಗಿ ಬೇಡಿಕೊಂಡು 24 ಗಂಟೆ ಯೊಳಗೆ ಕಾಣೆಯಾದವುಗಳು ನಮ್ಮ ಕಣ್ಣಿಗೆ ಬಿದ್ದೇ ಬೀಳುತ್ತವೆ, ಸಿಕ್ಕೇಸಿಗುತ್ತವೆ..!.

ಇದು ಪವಾಡವೋ.. ಕಾಕತಾಳೀಯವೋ.. ಎಂದು ಕೇಳಿದರೆ, ಒಂದು ಅಗೋಚರವಾದ ಶಕ್ತಿ ಇದೆ ಎಂದು ನಂಬಲೇಬೇಕಷ್ಟೆ... ಅದುವೇ ಕುಟ್ಟಿಚ್ಚಾತ್ತನ್‍ ದೈವ!

-ಉದಯರವಿ ಕೋಂಬ್ರಾಜೆ

Visit: Upayuktha Directory- You get here You want

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

1 تعليقات

إرسال تعليق

Post a Comment

أحدث أقدم