ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಆಲ್ಬಂ ಸಾಂಗ್‌: ಜಿತಿನ್ ಕುತ್ತಾರ್ ಕ್ಯಾಮರ ಕೈಚಳಕ, ನಿರ್ದೇಶನದ ರಾಧೇಶ್ಯಾಮ್ ಸಕ್ಕತ್ ಹಿಟ್

ಆಲ್ಬಂ ಸಾಂಗ್‌: ಜಿತಿನ್ ಕುತ್ತಾರ್ ಕ್ಯಾಮರ ಕೈಚಳಕ, ನಿರ್ದೇಶನದ ರಾಧೇಶ್ಯಾಮ್ ಸಕ್ಕತ್ ಹಿಟ್


ಕರಾವಳಿ ಭಾಗದಲ್ಲಿ ಅದೆಷ್ಟೋ ಮಂದಿ ಆಲ್ಬಮ್ ಸಾಂಗ್ಸ್ ಮಾಡುತ್ತಿದ್ದಾರೆ. ತಮ್ಮಲ್ಲಿರುವ ಪ್ರತಿಭೆಗಳನ್ನು‌ ಹೊರಹಾಕುತ್ತಿದ್ದಾರೆ. ಇದೇ ರೀತಿ ಜನಗಳಿಗೆ ಏನಾದರೂ ಒಂದು ಅದ್ಭುತ  ಕಥೆಯೊಂದಿಗೆ ಒಂದು ಆಲ್ಬಮ್ ಸಾಂಗ್ಸ್ ನೀಡಬೇಕೆಂದು ಯೋಚಿಸಿದ ಜಿತಿನ್ ಕುತ್ತಾರು ಮತ್ತು ತಂಡ ಕೃಷ್ಣನ ಕಥೆ ಸಾರುವ ಒಂದು ಆಲ್ಬಮ್ ಸಾಂಗ್‌ಗೆ ಮುಂದಾಗುತ್ತಾರೆ. ನಂತರ ಕರಾವಳಿಯ ಖ್ಯಾತ ಸಾಹಿತ್ಯಗಾರ ಶೈಲು‌ ಕುಂಪಲ ಇದಕ್ಕೆ ಸಾಹಿತ್ಯ ನೀಡಿದ್ದು, ತೇಜಸ್ವಿನಿ ಎನ್.ವಿ ಇದಕ್ಕೆ ಸ್ವರ ನೀಡಿದ್ದಾರೆ.


ರಾಧೆಗಾಗಿ ಹುಡುಕಾಟ ನಡೆಸಿದಾಗ ತಂಡದ ಕಣ್ಣಿಗೆ ಬಿದ್ದವರು ಯುವ ಪ್ರತಿಭೆ   ಸೌಂದರ್ಯ ಕುಲಾಲ್. ಈಕೆ ರಾಧೆಯಾಗಿ ಬಹಳ ಅದ್ಬುತವಾಗಿ ನಟನೆಯೊಂದಿಗೆ ಕೃಷ್ಣನನ್ನು ವರ್ಣಿಸಿದ್ದಾರೆ. ಶಿವಮೊಗ್ಗ, ತೀರ್ಥಹಳ್ಳಿ, ಆಗುಂಬೆ ಹಾಗೂ ಇನ್ನಿತರ ಪ್ರವಾಸಿ ತಾಣ ಪ್ರದೇಶಗಳಲ್ಲಿ ಶೂಟಿಂಗ್ ನಡೆಸಿದ್ದು, ಜಿತಿನ್ ಕುತ್ತಾರ್ ಕ್ಯಾಮರ ಕೈ ಚಳಕದಿಂದ ಅದ್ಭುತವಾಗಿ ಮೂಡಿಬಂದಿದೆ.


ಈ ಹಾಡು ಬಿಡುಗಡೆಯಾದ ಕೆಲವೇ ಹೊತ್ತಿನಲ್ಲಿ 12 ಸಾವಿರ ಜನ ವೀಕ್ಷಿಸಿದ್ದು, ರಾಧೇಶ್ಯಾಮ್ ಜನರ ಮನಸನ್ನು ಗೆದ್ದಿದೆ.



(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


1 تعليقات

إرسال تعليق

Post a Comment

أحدث أقدم