ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಧರ್ಮಸ್ಥಳ ಸಬ್‌ ಇನ್‌ಸ್ಪೆಕ್ಟರ್ ಸಹಿತ 12 ಪೊಲೀಸ್ ಅಧಿಕಾರಿಗಳ ವರ್ಗಾವಣೆ: ಪಶ್ಚಿಮ ವಲಯ ಐಜಿಪಿ ಆದೇಶ

ಧರ್ಮಸ್ಥಳ ಸಬ್‌ ಇನ್‌ಸ್ಪೆಕ್ಟರ್ ಸಹಿತ 12 ಪೊಲೀಸ್ ಅಧಿಕಾರಿಗಳ ವರ್ಗಾವಣೆ: ಪಶ್ಚಿಮ ವಲಯ ಐಜಿಪಿ ಆದೇಶ



ಧರ್ಮಸ್ಥಳ: ಇಲ್ಲಿನ ಠಾಣೆಯಲ್ಲಿ ಸಬ್ ಇನ್ಸ್ಪೆಕ್ಟರ್  ಆಗಿ ಕಾರ್ಯಾಚರಿಸುತ್ತಿದ್ದ ಪವನ್ ನಾಯಕ್ ಅವರನ್ನು ಸೇರಿದಂತೆ  ಒಟ್ಟು 12  ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಪಶ್ಚಿಮ ವಲಯ ಪೊಲೀಸ್ ನಿರೀಕ್ಷಕರಾದ ದೇವ ಜ್ಯೋತಿ ರೈ ಆದೇಶ ಹೊರಡಿಸಿದ್ದಾರೆ. 


ಧರ್ಮಸ್ಥಳ ಪೊಲೀಸ್ ಸಬ್ ಇನ್ಸೆಕ್ಟರ್ ಪವನ್ ನಾಯಕ್ ಅವರನ್ನು ಉಡುಪಿ ಜಿಲ್ಲೆಯ ಬೈಂದೂರು ಠಾಣೆಗೆ ವರ್ಗಾಯಿಸಿ ಆದೇಶ ಹೊರಡಿಸಿದ್ದು,  ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಭಾರತಿ ಶೆಟ್ಟಿಯವರನ್ನು ಬಂಟ್ವಾಳ ಗ್ರಾಮಾಂತರ ಠಾಣೆಗೆ ವರ್ಗಾವಣೆ ಮಾಡಲಾಗಿದೆ.


ಸಬ್ ಇನ್ಸೆಕ್ಟರ್ ಪವನ್ ನಾಯಕ್ ಅವರು ತರಬೇತಿ ಮುಗಿಸಿ ಉಪ್ಪಿನಂಗಡಿಯಲ್ಲಿ ವೃತ್ತಿ ಜೀವನವನ್ನು ಆರಂಭಿಸಿದ್ದು, ಬೆಳ್ತಂಗಡಿ ಸಂಚಾರಿ ಪೊಲೀಸ್ ವಿಭಾಗದಲ್ಲಿ ನಾಲ್ಕು ತಿಂಗಳು ಹಾಗೂ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್ಪೆಕ್ಟರ್  ಆಗಿ ಒಂದು ವರ್ಷ ಕಾರ್ಯಾಚರಿಸಿದ್ದಾರೆ. 


ಹಾಗೇ ಭಾರತೀ ಶೆಟ್ಟಿ ಅವರು ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ  ಒಟ್ಟು ಮೂರು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದಾರೆ.

Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

0 تعليقات

إرسال تعليق

Post a Comment (0)

أحدث أقدم