ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸಹಕಾರಿ ಕ್ಷೇತ್ರವನ್ನು ರಾಜಕೀಯದಿಂದ ಮುಕ್ತ ಮಾಡುವ ಮೊದಲ ಹೆಜ್ಜೆ

ಸಹಕಾರಿ ಕ್ಷೇತ್ರವನ್ನು ರಾಜಕೀಯದಿಂದ ಮುಕ್ತ ಮಾಡುವ ಮೊದಲ ಹೆಜ್ಜೆ


ಸಹಕಾರಿ ವಲಯ ರಾಜಕೀಯ ಪ್ರಭಾವಳಿಯಿಂದ ಸಿಲುಕಿ ನಲುಗುತ್ತಿರುವುದು ಅಕ್ಷರಶಃ ಸತ್ಯ. ಇಂದು ಸಹಕಾರಿ ಕ್ಷೇತ್ರ ಬಲಿಷ್ಠ ರಾಜಕಾರಣಿಗಳ ಆಶ್ರಯತಾಣವೂ ಆಗುತ್ತಿರುವುದರಿಂದಲೇ ಸಹಕಾರಿ ರಂಗ ತನ್ನ ಮೌಲ್ಯ ಕಳಚಿಕೊಳ್ಳುತ್ತಿರುವುದು ಅಷ್ಟೇ ಸತ್ಯ. ಸಹಕಾರಿ ರಂಗದಲ್ಲಿ ಬಲಿತರು ರಾಜಕೀಯಕ್ಕೆ ಬರುವುದು ಅದೇ ರೀತಿಯಲ್ಲಿ ರಾಜಕೀಯದಲ್ಲಿ ಬಲಿತವರು ಸಹಕಾರಿ ವಲಯ ಆಶ್ರಯಿಸುವುದು ಇದು 'ಒಂದೇ ನಾಣ್ಯದ ಎರಡು ಮುಖ'ಗಳಾಗಿ ಕಾಣುವ ಪರಿಸ್ಥಿತಿಗೆ ಬಂದಿದ್ದೇವೆ.


ಮಾತ್ರವಲ್ಲ ಕೆಲವೊಂದು ಭ್ರಷ್ಟ ರಾಜಕಾರಣಿಗಳ ಧನ ವಿನಿಯೇೂಗಿಸುವ ಸಹಕಾರಿ ಸಂಸ್ಥೆಯಾಗುತ್ತಿರುವುದರಿಂದಲೇ ರಿಸರ್ವ್  ಬ್ಯಾಂಕ್ ಆಫ್‌ ಇಂಡಿಯಾ ಸಹಕಾರಿ ರಂಗದ ಉನ್ನತ ಬ್ಯಾಂಕ್‌ಗಳು ಅನ್ನಿಸಿಕೊಂಡ ಅರ್ಬನ್ ಕೊ ಆಪರೇಟಿವ್  ಬ್ಯಾಂಕ್‌ಗಳ ನಿರ್ದೇಶಕರ ಹುದ್ದೆಗೆ ಎಂ.ಪಿ.ಗಳು, ಎಂ.ಎಲ್.ಎ.ಗಳು, ಕೌನ್ಸಿಲರ್‌ಗಳು ಅರ್ಹತೆ ಹೊಂದಿರುವುದಿಲ್ಲ ಅನ್ನುವ ನಿಯಮಾವಳಿಯನ್ನು ಹೊಸದಾಗಿ ಜ್ಯಾರಿಗೆ ತಂದಿರುವ ಉದ್ದೇಶವೂ ಇದೇ ಆಗಿರುತ್ತದೆ. ಹಾಗಾಗಿ ರಾಜಕಾರಣಿಗಳ ಕಪ್ಪು ಹಣದ ಆಟ ಸಹಕಾರಿ ರಂಗದಲ್ಲಿ ನಡೆಯಬಾರದು ಅನ್ನುವ ಮೊದಲ ಹೆಜ್ಜೆಯೇ ನಿದೇ೯ಶಕರುಗಳ ಆರ್ಹತಾ ನಿಯಮಾವಳಿಯ ತಿದ್ದುಪಡಿ.


ಇಡೀ ದೇಶದಲ್ಲಿ ಸುಮಾರು 1450ಕ್ಕೂ ಹೆಚ್ಚು ಅರ್ಬನ್ ಕೇೂ.ಆಪರೇಟಿವ್ ಬ್ಯಾಂಕ್‌ಗಳಿವೆ. ಅಲ್ಲದೇ ಸುಮಾರು 150 ಕ್ಕೂ ಹೆಚ್ಚು ಅಂತರ್ ರಾಜ್ಯ ಕೇೂ.ಆಪರೇಟಿವ್ ಬ್ಯಾಂಕ್ ಕಾರ್ಯ ವಿಸ್ತರಣೆ ಮಾಡಿ ಕೊಂಡಿದ್ದಾವೆ. ಇವುಗಳು ಶೆಡ್ಯೂಲ್ಡ್‌ ಬ್ಯಾಂಕ್‌ಗಳಂತೆ ಕಾರ್ಯನಿರ್ವಹಿಸಬೇಕಾದ ಅಗತ್ಯ ಇದೆ ಎಂದು ಮನಗಂಡ ರಿಸರ್ವ್ ಬ್ಯಾಂಕ್ ಈ ಅರ್ಬನ್ ಕೇೂ.ಆಪರೇಟಿವ್ ಬ್ಯಾಂಕ್‌ಗಳ ಮ್ಯಾನೇಜಿಂಗ್ ಡೆೈರೆಕ್ಟರ್‌ಗಳ ಆಹ೯ತೆಯನ್ನು ಹೆಚ್ಚಿಸಿ ಬ್ಯಾಂಕಿಂಗ್ ಹಣಕಾಸು ಕ್ಷೇತ್ರದಲ್ಲಿ ಉನ್ನತ ಪದವಿ ಹೊಂದಿರುವುದು  ಅಗತ್ಯವೆಂದು ಬೊಟ್ಟುಮಾಡಿದೆ.


ಹಣಕಾಸು ಹೆಚ್ಚು ವಿನಿಯೇೂಗಿಸಿರುವ ನಿದೇ೯ಶಕರುಗಳು ತಮಗೆ ತೃಪ್ತಿ ನೀಡುವವರನ್ನೇ ಇಂತಹ ಉನ್ನತ ಹುದ್ದೆಯಲ್ಲಿ ಕೂರಿಸುವ ಪರಿಪಾಠ ಬೆಳೆದು ಬಂದಿತ್ತು. ಹಾಗಾಗಿ ಈ ಮೂಲಕ ಕೂಡಾ ಸಹಕಾರಿ ಬ್ಯಾಂಕ್‌ಗಳ ಮೇಲೆ ನಿಯಂತ್ರಣ ಹೇರುವ ಅಗತ್ಯವಿದೆ ಎಂದು ಈ ಬ್ರಹ್ಮಾಸ್ತ್ರವನ್ನು ಮೊದಲ ಹೆಜ್ಜೆಯಾಗಿ ಸಹಕಾರಿ ಕ್ಷೇತ್ರದ ಮೇಲೆ ಪ್ರಯೇೂಗಿಸಿದೆ ಎಂದೇ ಅರ್ಥೈಸಬೇಕಾಗಿದೆ.


ಇನ್ನೂ ಹಂತ ಹಂತವಾಗಿ ಸಹಕಾರಿ ರಂಗದ ಕೆಳ ಸ್ತರಕ್ಕೂ ಬಂದರೂ ಆಶ್ಚರ್ಯವಿಲ್ಲ.ಆದುದರಿಂದ ಈಗಲೇ ಎಚ್ಚೆತ್ತು ಕೊಂಡು ಸಹಕಾರಿ ತತ್ವಗಳನ್ನು ನಿಜವಾದ ಅರ್ಥದಲ್ಲಿ ಮೈಗೂಡಿಸಿಕೊಳ್ಳ ಬೇಕಾದದ್ದು ಸಕಾಲವೂ ಹೌದು. ಹಿಂದೆ ರಾಜಕೀಯ ಒಂದು ಸೇವಾ ಕ್ಷೇತ್ರವಾಗಿತ್ತು. ಆದರೆ ಈಗ ರಾಜಕೀಯ ಒಂದು ವ್ಯಾಪಾರಿ ಕ್ಷೇತ್ರವಾಗಿ ಬೆಳೆಯುತ್ತಿರುವ ಕಾರಣದಿಂದಲೇ  ಸಹಕಾರಿ ಎಂಬ ಪವಿತ್ರ ಕ್ಷೇತ್ರದಿಂದ ಬೇರ್ಪಡಿಸಬೇಕಾದ ಕಾಲ ಕೂಡಿ ಬಂದಿದೆ. ನಿಮ್ಮ ಅಭಿಪ್ರಾಯವೂ ಮೂಡಿ ಬರಲಿ.

-ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ

Key Words: RBI, Co-operative banks, Regulations for urban cooperatives, ಸಹಕಾರಿ ಕ್ಷೇತ್ರ, ಆರ್‌ಬಿಐ, ರಿಸರ್ವ್‌ ಬ್ಯಾಂಕ್‌, 


(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

0 تعليقات

إرسال تعليق

Post a Comment (0)

أحدث أقدم