ಸುರತ್ಕಲ್: ಗೋವಿಂದದಾಸ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಹಾಗೂ ಇತಿಹಾಸ ಪ್ರಾಧ್ಯಾಪಕ, ಲೇಖಕ ಹಾಗೂ ಹಿರಿಯ ಪತ್ರಕರ್ತ ಪ್ರೊ. ಪಿ.ಕೆ. ಮೊಯ್ಲಿ (94ವ.) ಇಂದು ಸ್ವಗೃಹದಲ್ಲಿ ನಿಧನರಾದರು. ಆರು ಪುತ್ರಿಯರು ಹಾಗೂ ಅಳಿಯಂದಿರು, ಅಪಾರ ಶಿಷ್ಯ ವೃಂದವನ್ನುಅವರು ಅಗಲಿದ್ದಾರೆ.
ಮೂಲತಃ ಪಣಂಬೂರಿನವರಾದ ಪ್ರೊ.ಪಿ.ಕೆ.ಮೊಯ್ಲಿ ಸುರತ್ಕಲ್ ವಿದ್ಯಾದಾಯಿನೀ ಪ್ರೌಢಶಾಲೆಯ ಮೊದಲ ತಂಡದ ವಿದ್ಯಾರ್ಥಿಯಾಗಿದ್ದರು. ಜಿಲ್ಲಾ ಬೋರ್ಡ್‌ನ ಆಡಳಿತಕ್ಕೊಳಪಟ್ಟ ಮೂಡಬಿದ್ರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕನಾಗಿ ಸೇರಿ ಮುಂದೆ ಮಂಗಳೂರಿನಲ್ಲಿ ಶಿಕ್ಷಕ ತರಬೇತಿ, ದಕ್ಷಿಣ ಭಾರತ ಹಿಂದೀ ಪ್ರಚಾರ ಸಭೆಯ ರಾಷ್ಟ್ರ ಭಾಷಾ ಪ್ರವೀಣ ಪದವಿ, ಬಿ.ಎ. ಪದವಿ ಪಡೆದರು.
ಪಂಜದಲ್ಲಿ ಹೈಸ್ಕೂಲ್ ಶಿಕ್ಷಕರಾಗಿ ಸೇವೆಗೆ ಸೇರಿ ಮುಂದೆ ಬೈಂದೂರು, ಮುಡಿಪು, ಕಾರ್ಕಳಗಳಲ್ಲಿ ಪ್ರೌಢಶಾಲೆಗಳಲ್ಲಿ ಶಿಕ್ಷಕರಾಗಿ ಸೇರಿದರು. ಬನಾರಸ್ ವಿಶ್ವವಿದ್ಯಾನಿಲಯದಿಂದ ಇತಿಹಾಸ ವಿಷಯದಲ್ಲಿ ಎಂ.ಎ. ಪದವಿಯನ್ನು ಪಡೆದು ಪದವಿ ಪೂರ್ವ ಕಾಲೇಜಿನಲ್ಲಿಅಧ್ಯಾಪಕರಾಗಿ ಸೇರಿದರು.
1967ರಲ್ಲಿ ಗೋವಿಂದದಾಸ ಕಾಲೇಜು ಆರಂಭಗೊಂಡಾಗ ಇತಿಹಾಸ ಪ್ರಾಧ್ಯಾಪಕರಾಗಿ ಸೇರಿ ಪದೋನ್ನತಿ ಹೊಂದಿ 1984 ರಿಂದ 1988ರ ವರೆಗೆಗೋವಿಂದದಾಸ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು.
ನಿವೃತ್ತಿಯ ನಂತರ ಶ್ರೀ ನಾರಾಯಣಗುರು ಪ್ರೌಢ ಶಾಲೆ ಹಾಗೂ ಕಾರ್ಕಳದ ಶ್ರೀ ವೆಂಕಟ್ರಮಣ ಮಹಿಳಾ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು.
ಉತ್ತಮ ಸಾಹಿತಿಯಾಗಿದ್ದಇವರ ವಿವಿಧ ಕಥೆಗಳು ಹಾಗೂ ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಮಂಗಳೂರು ಆಕಾಶವಾಣಿಯಲ್ಲಿಇವರು ತುಳು ಹಾಗೂ ಕನ್ನಡಚಿಂತನೆ ಹಾಗೂ ಭಾಷಣಗಳು ಪ್ರಸಾರಗೊಂಡಿವೆ.
ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಯಾಗಿ ಅವರು ಸೇವೆ ಸಲ್ಲಿಸಿದರು. ಸಂಗೀತ, ಯಕ್ಷಗಾನ ನಾಟ್ಯಗಳಲ್ಲಿ ಒಲವು ಇರಿಸಿಕೊಂಡ ಇವರು ಮೃದಂಗ ವಾದನ ಹಾಗೂ ಭಾಗವತಿಕೆ ಅಭ್ಯಾಸ ಮಾಡಿದ್ದರು. ಯಕ್ಷಗಾನ ತಾಳ ಮದ್ದಲೆಯಲ್ಲಿ ಸಹೃದಯ ಪ್ರೇಕ್ಷಕರಾಗಿ ಹಾಗೂ ವಿಮರ್ಶಕರಾಗಿ ಜನಪ್ರಿಯರಾಗಿದ್ದರು.
ಅಪಾರ ಶಿಷ್ಯವೃಂದದ ಅಭಿಮಾನಕ್ಕೆ ಪಾತ್ರರಾಗಿದ್ದು ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ಒಳಗೊಂಡಂತೆ ವಿವಿಧ ಸಂಘ ಸಂಸ್ಥೆಗಳು ಸಮ್ಮಾನಿಸಿದ್ದವು. ಗೋವಿಂದದಾಸ ಕಾಲೇಜಿನಲ್ಲಿ ಪಿ.ಕೆ.ಮೊಯ್ಯಿಲಿ ಅಭಿನಂದನಾ ಸಮಿತಿ ವತಿಯಿಂದ ಎಪ್ರೀಲ್ ತಿಂಗಳಿನಲ್ಲಿ ಸಾರ್ವಜನಿಕ ಅಭಿನಂದನಾ ಸಮಾರಂಭ ನಡೆದಿತ್ತು. “ಗುರುಭ್ಯೋ ನಮಃ” ಅಭಿನಂದನಾ ಗ್ರಂಥವನ್ನು ಮೊಯ್ಲಿಯವರಿಗೆ ಅರ್ಪಿಸಲಾಗಿತ್ತು. ಅದರಲ್ಲಿಅವರ ಆತ್ಮಕತೆ ‘ಬಡವಂ ಬಲ್ಲಿದನಾಗನೇ” ಪ್ರಕಟಗೊಂಡಿದೆ.
ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ, ಹಿಂದು ವಿದ್ಯಾದಾಯಿನೀ ಸಂಘದ ಅಧ್ಯಕ್ಷ ಹೆಚ್.ಜಯಚಂದ್ರ ಹತ್ವಾರ್ ಹಾಗೂ ಆಡಳಿತ ಮಂಡಳಿ, ಗೋವಿಂದದಾಸ ಕಾಲೇಜಿನ ಪ್ರಾಂಶುಪಾಲ ಪ್ರೊ. ಕೃಷ್ಣಮೂರ್ತಿ ಪಿ., ಆಡಳಿತಾತ್ಮಕ ನಿರ್ದೇಶಕ ಪ್ರೊ.ಗೋಪಾಲ ಎಂ.ಗೋಖಲೆ, ರಕ್ಷಕ ಶಿಕ್ಷಕ ಸಂಘ, ಅಲ್ಯುಮ್ನಿ ಅಸೋಸಿಯೇಶನ್, ವಿದ್ಯಾದಾಯಿನೀ ಹಳೆ ವಿದ್ಯಾರ್ಥಿಸಂಘಗಳ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.
ಮೃತರ ಅಂತಿಮ ದರ್ಶನವು ನವೆಂಬರ್ 22ರಂದು ಸ್ವಗೃಹದಲ್ಲಿ ಬೆಳಿಗ್ಗೆ 9.00 ರಿಂದ 11ರ ವರೆಗೆ ನಡೆಯಲಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ
Post a Comment