ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಕುದಿ ವಸಂತ ಶೆಟ್ಟಿ ನಿಧನ

ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಕುದಿ ವಸಂತ ಶೆಟ್ಟಿ ನಿಧನ



ಹಿರಿಯಡಕ: ರಾಷ್ಟ್ರಪ್ರಶಸ್ತಿ ವಿಜೇತ, ಹಿರಿಯಡಕ ಕುದಿ ಗ್ರಾಮದ ಶ್ರೀ ವಿಷ್ಣುಮೂರ್ತಿ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಕುದಿ ವಸಂತ ಶೆಟ್ಟಿ ಅವರು ಸೋಮವಾರ (ನ.11) ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು.


ತನ್ನ ಊರಿನ ಪ್ರೌಢಶಾಲೆಯಲ್ಲಿ 1980ರಿಂದ ಸ್ಥಾಪಕ ಮುಖ್ಯ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿ 3 ದಶಕಗಳ ಕಾಲ ಸಲ್ಲಿಸಿದ್ದರು. ಕುದಿ ವಸಂತ ಶೆಟ್ಟಿಯವರು ಜಿಲ್ಲಾ ಮುಖ್ಯ ಶಿಕ್ಷಕರ ಸಂಘದ ಸ್ಥಾಪಕ ಕಾರ್ಯದರ್ಶಿಯಾಗಿ 4 ವರ್ಷ, ಅಧ್ಯಕ್ಷರಾಗಿ 5 ವರ್ಷ ಸೇವೆ ಸಲ್ಲಿಸಿದ್ದರು.


ಉತ್ತಮ ವಾಗ್ಮಿ, ಸಂಪನ್ಮೂಲ ವ್ಯಕ್ತಿಯಾಗಿದ್ದ ಅವರು ಊರಿನ ದೇವಸ್ಥಾನ, ದೈವಸ್ಥಾನಗಳ ಸಮಿತಿಯಲ್ಲಿ ಸೇವೆ ಮಾಡಿದ್ದರು. ಅವರು ಪತ್ನಿ ಇಬ್ಬರು ಪುತ್ರಿಯರು, ಸಹೋದರ ಸಹೋದರಿಯರನ್ನು ಆಗಲಿದ್ದಾರೆ.



ನುಡಿನಮನ:

ಆದರ್ಶ ಶಿಕ್ಷಕರಾಗಿ ಶಿಕ್ಷಣ ಕ್ಷೇತ್ರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಜಿಲ್ಲೆಯ ಹತ್ತು ಹಲವು ಕಾರ್ಯಕ್ರಮಗಳ ಸಂಯೇೂಜಕರಾಗಿ, ನಿರೂಪಕರಾಗಿ ತಮ್ಮ ಅನುಪಮ ಸೇವೆ ನೀಡುತ್ತಿದ್ದ ಕುದಿ ವಸಂತ ಶೆಟ್ಟಿಯವರು ಇನ್ನು ನಮ್ಮ ಮುಂದೆ ಇಲ್ಲ ಅನ್ನುವುದು ಅತ್ಯಂತ ದು:ಖದ ಸುದ್ದಿ.


ಶಿಕ್ಷಕ ಕುಟುಂಬದಲ್ಲಿ ಹುಟ್ಟಿ ಬಂದ ವಸಂತ ಶೆಟ್ಟಿಯವರು ಹಿರಿಯಡಕ ಸಮೀಪದ ಕೊಡಿಬೆಟ್ಟಿನಲ್ಲಿ ಶ್ರೀ ವಿಷ್ಣುಮೂtರ್ತಿ  ಪ್ರೌಢಶಾಲೆ ಸ್ಥಾಪಿಸುವುದರ ಮೂಲಕ ಗ್ರಾಮೀಣ ಪರಿಸರಕ್ಕೆ ಮೌಲ್ಯಾಧಾರಿತ ಶಿಕ್ಷಣ ನೀಡುವುದರಲ್ಲಿ ಕುದಿ ವಸಂತ ಶೆಟ್ಟಿಯವರ ಕೊಡುಗೆ ಅನನ್ಯ. ತಾವು ಸ್ಥಾಪಿಸಿದ ಪ್ರೌಢಶಾಲೆಯಲ್ಲಿ ಮುಖ್ಯೇೂಪಾಧ್ಯಾಯರಾಗಿ ಸುದೀರ್ಘ ಕಾಲ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಅವರ ಸೇವೆ ಸದಾ ನೆನಪಿಸುವಂತೆ ಮಾಡಿದೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾಗಿ ಶಿಕ್ಷಣ ರಂಗದಲ್ಲಿ ಮೇರು ವ್ಯಕ್ತಿತ್ವ ಬೆಳೆಸಿಕೊಂಡವರು.


ತುಳು ಭಾಷೆ ಸಂಸ್ಕೃತಿ ಆಚರಣೆಗಳು ಮುಂತಾದ ತುಳುವರ ಬದುಕನ್ನು ತುಳು ಚಾವಡಿಯಲ್ಲಿ ಪ್ರಧಾನ ಸಂಪನ್ಮೂಲ ಉಪನ್ಯಾಸಕರಾಗಿ ಈ ಕ್ಷೇತ್ರದಲ್ಲಿ ವಿಶೇಷವಾಗಿ ಅಧ್ಯಯನ ಮಾಡಿ ಉಣ ಬಡಿಸುತ್ತಿದ್ದ ರೀತಿ ನಿಜಕ್ಕೂ ಉತ್ಕೃಷ್ಟವಾದದ್ದು. ಸಂತಸ ಸಂತಾಪ ಕಾರ್ಯಕ್ರಮಗಳಲ್ಲಿ ತಾವೇ ಮುಂದೆ ನಿಂತು ಸಮಾಧಾನಿಸುತ್ತಿದ್ದ ರೀತಿ ನಿಜಕ್ಕೂ ಇನ್ನೂ ಮುಂದೆ ಸಹ ಕಣ್ಣಮುಂದೆ ನಿಂತಿದೆ.


ಕುದಿ ವಸಂತ ಶೆಟ್ಟಿಯವರು ಎಂಜಿಎಂ ಕಾಲೇಜಿನ ಪ್ರತಿಭಾವಂತ ಪ್ರಾಕ್ತನ ವಿದ್ಯಾರ್ಥಿಯಾಗಿದ್ದರು. ಪ್ರೊ.ಕು.ಶಿ. ಹರಿದಾಸ್ ಭಟ್ಟರ ಆಪ್ತ ಶಿಷ್ಯರಾಗಿ ಬೆಳೆದ ವಸಂತ ಶೆಟ್ಟಿಯವರು ತಾನು ಕಲಿತ ವಿದ್ಯಾ ಸಂಸ್ಥೆಯನ್ನು ಸದಾ ನೆನಪಿಸಿಕೊಳ್ಳುತ್ತಿದ್ದರು. ಇಂತಹ ಒಬ್ಬ ಮಹಾನ್ ಶಿಕ್ಷಕನನ್ನು ನಾವಿಂದು ಕಳೆದುಕೊಂಡಿದ್ದೇವೆ ಅನ್ನುವುದು ನಂಬಲು ಅಸಾಧ್ಯವಾದ ಸುದ್ದಿ. ಅಗಲಿದ ಈ ಮಹಾನ್ ಚೇತನಕ್ಕೆ ಸದ್ಗತಿ ಪ್ರಾಪ್ತವಾಗಲಿ 


- ಕೊಕ್ಕರ್ಣೆ ಸುರೇಂದ್ರ ನಾಥ ಶೆಟ್ಟಿ ಉಡುಪಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

0 Comments

Post a Comment

Post a Comment (0)

Previous Post Next Post